×
Ad

ಮಡಿಕೇರಿ: ಶಫ್ನಾಸ್‌ಗೆ ಡಾಕ್ಟರೇಟ್

Update: 2024-03-22 15:05 IST

ಮಡಿಕೇರಿ: ಸುಂಟಿಕೊಪ್ಪ ಸಮೀಪದ ಭೂತನಕಾಡುವಿನ ನಿವಾಸಿ ಶಫ್ನಾಸ್ ಅವರು ಮಂಡಿಸಿದ ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ್ತ್ರದ ಪ್ರಬಂಧಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ್ತ್ರದ ವಿಷಯವನ್ನು ಡಾ.ಕೆ.ಎಸ್.ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ನಡೆಸಿದ್ದರು.

ಸುಂಟಿಕೊಪ್ಪ ಸಮೀಪದ ಭೂತಕಾಡುವಿನ ಐ.ಇಸ್ಮಾಯಿಲ್ ಮತ್ತು ಶಹರ್‌ ಬಾನು ಕೆ.ವಿ. ದಂಪತಿಯ ಪುತ್ರಿಯಾಗಿರುವ ಶಫ್ನಾಸ್ ಐ. (ಎಫ್‌ಸಿಐ) ಭಾರತೀಯ ಆಹಾರ ಕಾರ್ಪೊರೇಷನ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News