×
Ad

ಹೊದ್ದೂರು: ಗ್ರಾಪಂಗೆ ಅಂಡಮಾನ್ ನಿಕೋಬಾರ್ ನ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿ, ಅಧಿಕಾರಿಗಳ ನಿಯೋಗ ಭೇಟಿ

Update: 2025-04-09 12:37 IST

ಮಡಿಕೇರಿ: ಕರ್ನಾಟಕ ರಾಜ್ಯದಲ್ಲೇ ಮಾದರಿ ಗ್ರಾಮ ಪಂಚಾಯತ್ ಹಾಗೂ ಇತ್ತೀಚೆಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತ್ ಗೆ ಅಂಡಮಾನ್ ನಿಕೋಬಾರ್ ದ್ವೀಪಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ ನಿಯೋಗ ಭೇಟಿ ನೀಡಿತು.

 ಹೊದ್ದೂರು ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯದ ಬಗ್ಗೆ ಅಂಡಮಾನ್ ನಿಕೋಬಾರ್ ದ್ವೀಪದ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್.ಎ ಹಂಝ ಕೊಟ್ಟಮುಡಿ, ಹೊದ್ದೂರು ಗ್ರಾಪಂ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಿಂದ ಗ್ರಾಪಂ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶ್ರಮಿಸಲಾಗುವುದು ಎಂದರು.

ಈ ಸಂದರ್ಭ ಅಂಡಮಾನ್ ನಿಕೋಬಾರ್ ದ್ವೀಪದ ಜನಪ್ರತಿನಿಧಿಗಳಾದ ಆರ್.ಮಾಧವನ್, ದಿಪಾಂಕರ್ ಮಿಸ್ಟ್ರಿ, ನಾರಾಯಣ್ ಮೊಂಡಲ್, ಸುಜಿತ್ ಮಿಸ್ಟ್ರಿ, ಉಮಾ ಶಂಕರ್ ಸರ್ಕಾರ್, ಎಸ್. ಪರಮಾನಂದನ್, ಪರಿಮಾಲ್ ಸಿ.ಎಚ್ ಮೊಂಡಲ್, ಸಿತಾ ಮಾಹಿಜಿ, ಶಿಬಾನಿ ಮಾಜುಮಡರ್, ಅರ್ಚನ ಕುಮಾರಿ, ಎಂ.ರಜನಿ, ಡಿ.ಪದ್ಮಾವತಿ, ಚಂಪಾ ದಾಸ್, ತಪಾಸಿ ಸಹಾ, ರಶೀದಾ ಬೀಬಿ,

ಹೊದ್ದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲಾ, ಸದಸ್ಯರಾದ ಹಮೀದ್ ಕಬಡಕ್ಕೇರಿ, ಕುಸುಮಾವತಿ,ಮೊಣ್ಣಪ್ಪ, ಟ್ಯಾನಿ, ಪಾರ್ವತಿ, ಮೊಯ್ದು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News