Ponnampete | ಚಾಲಕನ ಕೊಲೆ ಶಂಕೆ : ದೂರು ದಾಖಲು
ದೇಹದಲ್ಲಿ ಹಲ್ಲೆಯ ಗುರುತುಗಳು ಪತ್ತೆ!
Update: 2026-01-01 18:25 IST
ಸಾಂದರ್ಭಿಕ ಚಿತ್ರ
ಮಡಿಕೇರಿ : ಗೋಣಿಕೊಪ್ಪಲು ಗ್ರಾಮದ ಹರಿಶ್ಚಂದ್ರಪುರದ ನಿವಾಸಿ, ಚಾಲಕ ವೃತ್ತಿಯ ನವಾಝ್(36) ಎಂಬವರು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿದೆ.
ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗಳಿಂದ ನವಾಝ್ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಇವರ ದೇಹವನ್ನು ಪರಿಶೀಲಿಸಿದ ಸಂದರ್ಭ ಬೆನ್ನು ಮತ್ತು ಇತರ ಭಾಗಗಳಲ್ಲಿ ದೊಣ್ಣೆ ಮತ್ತಿತರ ವಸ್ತುಗಳಿಂದ ತೀವ್ರ ಹಲ್ಲೆ ನಡೆಸಿರುವ ಗುರುತುಗಳು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಮೃತದೇಹದ ಮರಣೋತ್ತರ ಪರೀಕ್ಷೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.