×
Ad

ಕೊಡಗಿನ ವಿವಿಧೆಡೆ ತಂಪೆರೆದ ಮಳೆ

Update: 2024-04-07 18:32 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಉಷ್ಣಾಂಶದಿಂದ ಜನ ತತ್ತರಿಸಿ ಹೋಗಿದ್ದು, ಇಂದು ಜಿಲ್ಲೆಯ ವಿವಿಧೆಡೆ ಸುರಿದ ಮಳೆ ಜನರನ್ನು ಕೊಂಚ ನಿರಾಳರಾಗುವಂತೆ ಮಾಡಿದೆ.

ಅತಿಹೆಚ್ಚು ವರ್ಷಧಾರೆಯಾಗುವ ಭಾಗಮಂಡಲದಲ್ಲಿ ವರ್ಷದ ಮೊದಲ ಮಳೆ ಇಂದು ಸುರಿಯಿತು. ಚೇರಂಬಾಣೆ, ನಾಪೋಕ್ಲು, ಎಮ್ಮೆಮಾಡು, ನೆಲಜಿ, ಕಾರುಗುಂದ, ಕಡಿಯತ್ತೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News