×
Ad

ಮಡಿಕೇರಿ: ಕಟ್ಟೆಮಾಡು ದೇವಾಲಯ ವ್ಯಾಪ್ತಿಯಲ್ಲಿ ಮಾ.13 ರವರೆಗೆ ನಿರ್ಬಂಧ

Update: 2025-02-10 23:15 IST

ಮಡಿಕೇರಿ: ವಸ್ತ್ರ ಸಂಹಿತೆ ಕುರಿತು ಎರಡು ಸಮುದಾಯಗಳ ನಡುವೆ ಮೂಡಿರುವ ಭಿನ್ನಾಭಿಪ್ರಾಯದಿಂದ ಗೊಂದಲ ಸೃಷ್ಟಿಯಾಗಿರುವ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ 200 ಮೀಟರ್ ವ್ಯಾಪ್ತಿಯಲ್ಲಿ ಮತ್ತೆ ಮಾ.13 ರವರೆಗೆ ನಿರ್ಬಂಧ ವಿಧಿಸಿ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ನಿರ್ಬಂಧಕಾಜ್ಞೆ ಜಾರಿಯಲ್ಲಿದ್ದು, ಇದೀಗ ಮತ್ತೆ ಫೆ.11 ರಿಂದ ಮಾ.13 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ 5ಕ್ಕೂ ಅಧಿಕ ಮಂದಿ ಸೇರಬಾರದು, ರ್ಯಾಲಿ, ಜಾಥ, ಪ್ರತಿಭಟನೆ ನಡೆಸಬಾರದು, ಪ್ರಚೋದನಾತ್ಮಕ ಘೋಷಣೆ ಕೂಗಬಾರದು ಎಂದು ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News