×
Ad

ಸುಂಟಿಕೊಪ್ಪ: ಮಹಡಿ ಮೇಲಿಂದ ಬಿದ್ದು ವ್ಯಕ್ತಿ ಮೃತ್ಯು

Update: 2024-08-04 22:54 IST

ಸುಂಟಿಕೊಪ್ಪ: ಆಯತಪ್ಪಿ ಮಹಡಿ ಮೇಲಿಂದ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರೂ ಮೃತಪಟ್ಟ ಘಟನೆ ರವಿವಾರ ಮದ್ಯಾಹ್ನ ನಡೆದಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದ್ಯಾ ಎಂಬವರ ಪತಿ, ಬೈಕ್ ಮೆಕಾನಿಕ್ ಶಶಿ (40) ಮೃತ ದುರ್ದೈವಿಯಾಗಿದ್ದಾರೆ.

ತಮ್ಮ ಮನೆಯ ಹಿಂಭಾಗದಲ್ಲಿ ನಿಂತಿದ್ದ ವೇಳೆ ಆಯತಪ್ಪಿ ಶೀಟಿನ ಮೇಲೆ ಬಿದ್ದಿದ್ದಾರೆ.

ಗಂಭೀರ ಗಾಯಗೊಂಡಿದ್ದ ಶಶಿ ಅವರನ್ನು ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News