×
Ad

ಮಡಿಕೇರಿ | ಸಿಡಿಲು ಬಡಿದು ಮನೆಗೆ ಹಾನಿ

Update: 2024-05-12 19:37 IST

 ಮಡಿಕೇರಿ : ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಕಾಲೂರು ಗ್ರಾಮದ ಬಾರಿಕೆ ಮೊಟ್ಟೆ ಎಂಬಲ್ಲಿ ಶನಿವಾರ ರಾತ್ರಿ ಜೋರಾಗಿ ಮಳೆ ಸುರಿದು ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿದೆ. ಸಿಡಿಲಬ್ಬರಕ್ಕೆ ಮನೆಯ ಒಂದು ಭಾಗ ಬಿದ್ದು ಹೋಗಿದೆ.

ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯ ವಿವಿಧೆಡೆ ನಸುಕಿನಲ್ಲಿ ಅಥವಾ ರಾತ್ರಿ ವೇಳೆ ಗಾಳಿ, ಸಿಡಿಲು ಸಹಿತ ಮಳೆಯಾಗುತ್ತಿದ್ದು, ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಮನೆಯಲ್ಲಿದ್ದ ಲಿಂಗಮ್ಮ ಹಾಗೂ ಅವರ ಪುತ್ರ ಕಿರಣ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದು ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮನೆಯವರು ಹೇಳಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗಾಳಿಬೀಡು ಗ್ರಾಮ ಪಂಚಾಯ್ತಿ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News