ಮಡಿಕೇರಿ| ಗುಂಡಿಕ್ಕಿ ತಮ್ಮನ ಹತ್ಯೆ; ಆರೋಪಿ ಅಣ್ಣನ ಬಂಧನ
Update: 2025-05-06 21:23 IST
ವಿನಯ್ ಕುಮಾರ್ / ಎಸ್. ಸುಬ್ಬಯ್ಯ
ಮಡಿಕೇರಿ: ಚೆಟ್ಟಳ್ಳಿ ಬಳಿಯ ಅಭ್ಯತ್ ಮಂಗಲ ಗ್ರಾಮದಲ್ಲಿ ವಿನಯ್ ಕುಮಾರ್ (53) ಎಂಬವರನ್ನು ಅವರ ಸಹೋದರನೇ ಗುಂಡಿಕ್ಕಿ ಹತ್ಯೆಗೈದ ಘಟನೆ ಮಂಗಳವಾರ ನಡೆದಿದೆ.
ವಿನಯ್ ಕುಮಾರ್ ರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪದಡಿ ಅವರ ಅಣ್ಣ ಎಸ್. ಸುಬ್ಬಯ್ಯ (72) ಎಂಬವರನ್ನು ಬಂಧಿಸಲಾಗಿದೆ.
ಸಹೋದರರ ನಡುವೆ ಆಸ್ತಿ ವಿವಾದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 11:45 ರ ಸುಮಾರಿಗೆ ಸುಬ್ಬಯ್ಯ ತನ್ನ ಮನೆಯಿಂದ ತನ್ನ SBBL ಬಂದೂಕನ್ನು ತೆಗೆದುಕೊಂಡು ತನ್ನ ಕಿರಿಯ ಸಹೋದರನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸುಬ್ಬಯ್ಯನನ್ನು ಬಂಧಿಸಲಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.