×
Ad

ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಓರ್ವನಿಗೆ ಚಾಕು ಇರಿತ; ಮೂವರ ಮೇಲೆ ಹಲ್ಲೆ

Update: 2024-09-24 09:37 IST

ಕೊಪ್ಪಳ: ಗುಂಡಮ್ಮ ಕ್ಯಾಂಪಿನ ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪಿನ ನಡುವೆ ಗಲಾಟೆ ನಡೆದು, ಯುವಕನೋರ್ವನಿಗೆ ಚಾಕು ಇರಿದಿರುವ ಘಟನೆ ಸೋಮವಾರ ತಡರಾತ್ರಿ ಗಂಗಾವತಿ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸೋಮವಾರ ಗಣಪತಿ ವಿಸರ್ಜನೆ ವೇಳೆ ಡಾನ್ಸ್ ವಿಚಾರವಾಗಿ ಶುರುವಾರದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.  

 ಅಂಬೇಡ್ಕರ್ ನಗರದ ಶಿವು (38)  ಇರಿತಕ್ಕೊಳಗಾದ ಯುವಕ. ಈತನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳಿಸಲಾಗಿದೆ. ಗಣೇಶ, ಮಂಜು, ಸಾಗರ ಎಂಬವರ ಮೇಲೂ ಹಲ್ಲೆ ನಡೆದಿದ್ದು, ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ  20  ಮಂದಿಯ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿ ಮಾಹಿತಿ ನಿರೀಕ್ಷಿಸಲಾಗಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News