ಕೊಪ್ಪಳ: ಬಸ್ ಪಲ್ಟಿ; ಬಾಲಕ ಮೃತ್ಯು, ಐದು ಮಂದಿಗೆ ಗಂಭೀರ ಗಾಯ
Update: 2025-01-29 09:34 IST
ಕೊಪ್ಪಳ: ಬಸ್ ಪಲ್ಟಿಯಾಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ಹೊಸಳ್ಳಿ ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟಿರುವ ಬಾಲಕನನ್ನು ಬಾನಾಪುರದ ವಿವೇಕ್ (9) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಗಜೇಂದ್ರಗಡಕ್ಕೆ ತೆರಳುತ್ತಿದ್ದ ಬಾಲಾಜಿ ಟ್ರಾವೆಲ್ಸ್ ನ ಬಸ್ ಅಪಘಾತಕ್ಕೊಳಗಾಗಿದ್ದು, ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಗೋಗೇರಿಯಲ್ಲಿ ಹೈ ಸ್ಕೂಲ್ ಟೀಚರ್ ಆಗಿದ್ದ ತಂದೆಯನ್ನು ನೋಡಲು ಬಾಲಕ ವಿವೇಕ್ ಬಾನಾಪುರದಿಂದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಎನ್ನಲಾಗಿದೆ.
ಬಸ್ಸಿನಲ್ಲಿ ಒಟ್ಟು 15 ಜನ ಪ್ರಯಾಣ ಮಾಡುತ್ತಿದ್ದರು,ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಐದು ಜನರಿಗೆ ಗಂಭೀರ ಗಾಯಗಳಾಗಿವೆ,ಗಾಯಾಳುಗಳನ್ನು ಯಲಬುರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಚಾಲಕ ಪರಾರಿ ಪರಾರಿಯಾಗಿದ್ದು ,ಯಲಬುರ್ಗಾ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.