×
Ad

ಕೊಪ್ಪಳ | ಗಣಪತಿ ಮೂರ್ತಿ ಸಾಗಿಸುತ್ತಿದ್ದ ವಾಹನಕ್ಕೆ ಲಾರಿ ಢಿಕ್ಕಿ ; ನಾಲ್ವರಿಗೆ ಗಂಭೀರ ಗಾಯ

Update: 2024-09-07 15:34 IST

ಕೊಪ್ಪಳ : ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮಕ್ಕೆ ಟ್ರ್ಯಾಕ್ಟ‌ರ್ ಮೂಲಕ ಗಣಪತಿಯ ಮೂರ್ತಿ ಸಾಗಿಸುತ್ತಿದ್ದರು. ಲಾರಿಯೊಂದು ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಗಂಭೀರ ಗಾಯಗೊಂದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿ ಬಂದು ಗುದ್ದಿದ ಪರಿಣಾಮ ಗಣೇಶನ ಮೂರ್ತಿ ನೆಲಕ್ಕುರುಳಿದಿದೆ. ಘಟನೆ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News