×
Ad

ಕೊಪ್ಪಳ | ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರ

Update: 2025-07-24 17:36 IST

ಕೊಪ್ಪಳ: ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ನಗರದ ಮುಸ್ಲಿಂ ಶಾದಿ ಮಹಲ್ ನಲ್ಲಿ ಬಾಲ್ದೋಟ ಮತ್ತು ಜೈಪುರ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಜು.24ರಿಂದ 26ರವರೆಗೆ ನಗರ ಸಭೆ ಎದುರುಗಡೆ ಇರುವ ಮುಸ್ಲಿಂ ಶಾದಿ ಮಹಲ್ ನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಯೋಜಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಹೊಸಪೇಟೆ ನಗರದಲ್ಲಿ 10 ಬಾರಿ ಮತ್ತು ಕೊಪ್ಪಳದಲ್ಲಿ ಒಂದು ಬಾರಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಸುಮಾರು 2,615 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದ್ದು, 1,320 ಜನರಿಗೆ ಕೃತಕ ಕಾಲು, 770 ಕ್ಯಾಲಿಪರ್ಸ್, 44 ವಾಕರ್, 78 ಕೈ ಗೋಲು, 271 ಜನರಿಗೆ ಊರುಗೋಲುಗಳನ್ನು, 41 ಜನರಿಗೆ ಗಾಲಿ ಕುರ್ಚಿಗಳನ್ನು ಮತ್ತು 38 ಜನರಿಗೆ ಕೈಚಾಲಿತ ಸೈಕಲ್ ಪಡೆದರೆ, 53 ಲಘು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಈ ಶಿಬಿರವನ್ನು ಕೊಪ್ಪಳ ಜಿಲ್ಲೆ, ವಿಜಯನಗರ, ಬಳ್ಳಾರಿ, ಗದಗ, ಮತ್ತು ರಾಯಚೂರು ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ, ಕೊಪ್ಪಳ ನಗರದಲ್ಲಿ ಆಯೋಜಿಸಿದ್ದು, ಈ ವರ್ಷವು ಸಹ ಆವಶ್ಯಕವೆನಿಸಿದವರಿಗೆ ಈ ಮೇಲಿನ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ಹುಟ್ಟಿನಿಂದ ಕಾಲಿನ ಅಂಗವಿಕಲತೆ ಹೊಂದಿದವರು, ಪೋಲಿಯೊ ಪೀಡಿತರು, ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿದವರು ಈ ಶಿಬಿರದ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ಬಿ.ಎಂ ನಾಗರಾಜ್ (9902500250) ಅವರಿಗೆ ಅಥವಾ ಎಸ್.ಎಂ ಶಂಭುಲಿಂಗಯ್ಯ (9449135837) ಇವರನ್ನು ಸಂಪರ್ಕಿಸಿ ಹೆಸರು ನೊಂದಯಿಸಿಕೊಳ್ಳಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News