×
Ad

ಕೊಪ್ಪಳ | ವಿವಾಹಿತ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ದಂಪತಿ ಸೇರಿ ತಂದೆ-ತಾಯಿಗೂ ಬಹಿಷ್ಕಾರ!

Update: 2025-05-18 19:17 IST

ಸಾಂದರ್ಭಿಕ ಚಿತ್ರ

ಕೊಪ್ಪಳ: ವಿವಾಹಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷಗಳಿಂದ ಇಡೀ ಕುಟುಂಬವನ್ನು ಅವರದ್ದೇ ಸಮಾಜದವರು ಬಹಿಷ್ಕರಿಸಿದ್ದಾರೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹನುಮಂತಪ್ಪ ಮತ್ತು ಮಂಜುಳಾ ಹುಳ್ಳಿ ಎಂಬವರು 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ಖಂಡಿಸಿ, ಇವರ ಜೊತೆಗೆ ಇಡೀ ಕುಟುಂಬವನ್ನು ಬಹಿಷ್ಕರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ:

ಹನುಮಂತಪ್ಪ ಮತ್ತು ಮಂಜುಳಾ ಹುಳ್ಳಿ ಎಂಬವರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಯ ಮನೆಯವರು ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ನಂತರ ಯುವತಿಯನ್ನು ಬೇರೊಬ್ಬರಿಗೆ ನೀಡಿ ಮದುವೆ ಮಾಡಲಾಯಿತು. ಆದರೆ ಮದುವೆಯಾಗಿ ಕೆಲದಿನಗಳ ನಂತರ ಯುವತಿಯು ತನ್ನ ಪತಿಯನ್ನು ತೊರೆದು ಹನುಮಂತಪ್ಪರನ್ನು ವಿವಾಹವಾಗಿದ್ದರು. ಈ ಕಾರಣದಿಂದ ಈ ಕುಟುಂಬವನ್ನು ಪರ್ವತ ಮಲ್ಲಯ್ಯ ಎಂಬ ಸಮಾಜ 8 ವರ್ಷದ ಹಿಂದೆ ಬಹಿಷ್ಕಾರ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಊರಿನಿಂದ ಊರಿಗೆ ಅಳೆಯುತಿದ್ದ, ಈ ಕುಟುಂಬ ಸದ್ಯ ಕೊಪ್ಪಳ ತಾಲೂಕಿನ ಚಿಲಕಮುಕ್ಕಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News