×
Ad

ಕೊಪ್ಪಳ | ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Update: 2025-07-09 18:10 IST

ಕೊಪ್ಪಳ: ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಮತ್ತು ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಕೊಪ್ಪಳ ಜಿಲ್ಲಾ ಕುಳುವ ಮಹಾ ಸಂಘ ದಿಂದ ಜಿಲ್ಲಾಧಿಕಾರಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಳುವ ಮಹಾ ಸಂಘದ ಜಿಲಾಧ್ಯಕ್ಷ ಬಸಣ್ಣ ಓಜನಳ್ಳಿ ಅವರು, ಜಿ.ಪಲ್ಲವಿಯವರ ನಿಗಮದ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೂ ಸಮಸ್ತ 51 ಪರಿಶಿಷ್ಟ ಜಾತಿಗಳಲ್ಲಿ ಯಾವುದೇ ಬೇದಭಾವ ತೋರದೆ 51 ಅಲೆಮಾರಿ ಜಾತಿಗಳನ್ನು ಒಗ್ಗಟ್ಟಾಗಿ ಕರೆದೊಯ್ಯಲು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಾಂತ ಎಲ್ಲಾ ತಾಲ್ಲೂಕು ಜಿಲ್ಲೆಗಳಿಗೆ ಪ್ರವಾಸವನ್ನು ಜಿ.ಪಲ್ಲವಿ ಯವರು ಮಾಡುತ್ತಿದ್ದಾರೆ.

ದಕ್ಷ ಆಡಳಿತ, ಅವಿರತ ಪರಿಶ್ರಮ ಸೇವೆ ಮಾಡುವ ಮನೋಭಾವ ಇರುವ ಪಲ್ಲವಿಯವರ ಏಳಿಗೆ ಮತ್ತು ವ್ಯಾಪಕ ಜನಪ್ರತಿಯತೆಯನ್ನು ಸಹಿಸದ ಮತ್ತು ಮುಂದಿನ ತಿಂಗಳು ನಿಗಮದಿಂದಲೇ ರಾಜ್ಯಮಟ್ಟದ ಸಮಾವೇಶ ನಡೆಸಲು ಮುಂದಾಗಿರುವುದನ್ನು ಆರಿತು ಅವರ ಮೇಲೆ ಹಲ್ಲೆ ನಡೆಸುವ ಕೃತ್ಯ ಮಾಡಿದ್ದಾರೆ ಎಂದು ಹೇಳಿದರು.

ಈ ಕೂಡಲೇ ಸಂಬಂಧ ಪಟ್ಟ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಲೋಕೇಶ್, ಕೊಂಬಣ್ಣ, ಭೀಮಣ್ಣ, ಲಕ್ಷ್ಮಣ್ಣ, ಹನುಮಪ್ಪ, ನಾಗರಾಜ್ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News