×
Ad

ಕೊಪ್ಪಳ: ಹಳೆ ದ್ವೇಷದ ಹಿನ್ನೆಲೆ; ವ್ಯಕ್ತಿಯ ಹತ್ಯೆ

Update: 2025-06-01 11:59 IST

ಚೆನ್ನಪ್ಪ ಹರಿಜನ್

ಕೊಪ್ಪಳ: ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದ ಘಟನೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿ ಚೆನ್ನಪ್ಪ ಹರಿಜನ್ (30) ಎಂದು ಗುರುತಿಸಲಾಗಿದೆ. ಪಟ್ಟಣದ ಹಳೆ ಬಸ್ ನಿಲ್ದಾಣದ ಬೇಕರಿ ಮುಂದೆ ಘಟನೆ ನಡೆದಿದ್ದು,ಈ ಕೊಲೆಗೆ ಹಳೆ ದ್ವೇಷವೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ  ರವಿ ನಾರಿನಾಳ, ಪ್ರದೀಪ ನಾರಿನಾಳ, ಮಂಜುನಾಥ ನಾರಿನಾಳ, ನಾಗರಾಜ ನಾರಿನಾಳ ಸಹಿತ ಹತ್ತು ಮಂದಿಯ ವಿರುದ್ಧ ತಾವರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ಎಲ್.ಆ‌ರ್. ಅರಸಿದ್ದಿ, ಗಂಗಾವತಿ ಡಿಎಸ್ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ್ ಬಿಸನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News