×
Ad

ಕೊಪ್ಪಳ| ಎಫ್ ಐಆರ್ ಮಾಡಲು ದೂರುದಾರನಲ್ಲಿ ಪೇಪರ್ ತರಿಸಿದ ಹೆಡ್ ಕಾನ್‌ಸ್ಟೇಬಲ್ ಅಮಾನತು

Update: 2025-12-23 21:55 IST

ಕನಕಗಿರಿ: ನಾಪತ್ತೆ ದೂರು ದಾಖಲಿಸಲು ತೆರಳಿದ ವ್ಯಕ್ತಿಯಲ್ಲಿ ಎಫ್ ಐಆರ್ ಮಾಡಲು ಪೇಪರ್ ತರಿಸಿದ ಕನಕಗಿರಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ನನ್ನು ಅಮಾನತುಗೊಳಿಸಲಾಗಿದೆ.  

ಪರುಶುರಾಮ ಅಮಾನತಾದ ಹೆಡ್ ಕಾನ್‌ಸ್ಟೇಬಲ್.

ಅರಳಹಳ್ಳಿ ನಿವಾಸಿ ವ್ಯಕ್ತಿಯೋರ್ವರು  ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಕನಕಗಿರಿ ಪೊಲೀಸ್‌ ಠಾಣೆಗೆ ತೆರಳಿದ್ದರು.  ಈ ವೇಳೆ ಹೆಡ್ ಕಾನ್ ಸ್ಟೇಬಲ್ (ರೈಟರ್) ದೂರುದಾರನಿಗೆ ಪೇಪರ್‌ ತರುವಂತೆ ಸೂಚಿಸಿದ್ದರು.  ಈ ಕುರಿತ ವಿಡಿಯೋ ಮಂಗಳವಾರ ವೈರಲ್ ಆಗಿತ್ತು.

ಇದರ ಬೆನ್ನಲ್ಲೆ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ರಾಮ ಲಕ್ಷ್ಮಣ್ ಅರಸಿದ್ಧಿ ಅವರು ಪರಶುರಾಮ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News