×
Ad

ಶ್ರೀನಗರದಲ್ಲಿರುವ ಕೊಪ್ಪಳದ ನಿವಾಸಿಗಳು ಸುರಕ್ಷಿತವಾಗಿದ್ದಾರೆ : ಎಸ್ಪಿ ರಾಮ್ ಎಲ್.ಅರಸಿದ್ಧಿ

Update: 2025-04-23 18:05 IST

Photo credit: PTI

ಕೊಪ್ಪಳ | ಶ್ರೀನಗರದಲ್ಲಿರುವ ಕೊಪ್ಪಳದ ನಿವಾಸಿಗಳು ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಹೇಳಿದರು.

ಕೊಪ್ಪಳ ನಗರದ ಕಾಂಗ್ರೆಸ್ ಮುಖಂಡ ಕಾಟನ್‌ ಪಾಷಾ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಅವರು ಕುಟುಂಬದ ಸದಸ್ಯರ ಜೊತೆ ಮಂಗಳವಾರ ಸಂಜೆ ಮುಂಬೈನಿಂದ ಶ್ರೀನಗರಕ್ಕೆ ತೆರಳಿದ್ದಾರೆ.

ಉಗ್ರರ ದಾಳಿಬಗ್ಗೆ ತಿಳಿದು ಆತಂಕಗೊಂಡು, ಪ್ರವಾಸ ಮುಂದುವರಿಸಬೇಕೇ, ವಾಪಸ್ ಬರಬೇಕೇ? ಎನ್ನುವ ಗೊಂದಲದಲ್ಲಿದ್ದಾರೆ. ಭಯೋತ್ಪಾದಕರ ದಾಳಿ ನಡೆದ ಸ್ಥಳದಿಂದ 100 ಕಿ.ಮೀ. ದೂರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News