ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ (PTI)
ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಲಾಗಿದೆ.
ರೈಲ್ವೇ ನೇಮಕಾತಿ ಮಂಡಳಿಗಳು (RRB) ಗ್ರೂಪ್-ಡಿ (ಹಂತ 1) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ತಾಣಗಳಲ್ಲಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯನ್ನು 22,000 + ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಲಾಗಿದೆ. ಆರ್ಆರ್ಬಿ ಘೋಷಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 2026 ಜನವರಿ 31ರಿಂದ ಆರಂಭವಾಗುತ್ತದೆ. ಅಭ್ಯರ್ಥಿಗಳು 20226 ಮಾರ್ಚ್ 02ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 36 ವರ್ಷಗಳು. ಈ ಸಂಬಂಧಿತ ವಿವರಗಳು ಈ ಕೆಳಗಿನಂತಿವೆ. ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/landing
ಪ್ರಮುಖ ದಿನಾಂಕಗಳು
• ಅಧಿಸೂಚನೆ ದಿನಾಂಕ: 30 ಜನವರಿ 2026
• ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಮಾರ್ಚ್ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2 ಮಾರ್ಚ್ 2026
• ಪರೀಕ್ಷೆ ದಿನಾಂಕ: ಶೀಘ್ರವೇ ತಿಳಿಸಲಾಗುವುದು
• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
• ವಿವರಗಳಿಗೆ ಅಭ್ಯರ್ಥಿಗಳು ಆರ್ಆರ್ಬಿ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.
ಅರ್ಜಿ ಶುಲ್ಕ
ಜನರಲ್/ಒಬಿಸಿ/ಇಡಬ್ಲ್ಯುಎಸ್: 500 ರೂ. (+ ಜಿಎಸ್ಟಿ ಶೇ 18) ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಇಎಕ್ಸ್ಎಸ್: 250 ರೂ. (+ ಜಿಎಸ್ಟಿ ಶೇ 18)
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
ಒಟ್ಟು ಹುದ್ದೆಗಳು
22,000 ಕ್ಕೂ ಅಧಿಕ ಹುದ್ದೆಗಳು
ಜನರಲ್ – 9235 ಹುದ್ದೆಗಳು
ಇಡಬ್ಲ್ಯುಸಿ- 2237 ಹುದ್ದೆಗಳು
ಒಬಿಸಿ- 5217 ಹುದ್ದೆಗಳು
ಎಸ್ಸಿ- 3231 ಹುದ್ದೆಗಳು
ಎಸ್ಟಿ- 1726 ಹುದ್ದೆಗಳು
ಹುದ್ದೆಯ ಹೆಸರು
ಪಾಯಿಂಟ್ಸ್ಮ್ಯಾನ್-ಬಿ, ಸಹಾಯಕ (ಟ್ರ್ಯಾಕ್ ಮಿಷಿನ್), ಸಹಾಯಕ (ಬ್ರಿಡ್ಜ್), ಟ್ರ್ಯಾಕ್ ಮೈಂಟೇನೆನ್ಸ್ ಜ್ಯೂನಿಯರ್, ಸಹಾಯಕ ಪಿ-ವೇ, ಸಹಾಯಕ (ಸಿ&ಡಬ್ಲ್ಯು). ಸಹಾಯಕ ಟಿಆರ್ಡಿ, ಸಹಾಯಕ (ಎಸ್ &ಟಿ), ಸಹಾಯಕ ಲೋಕೋ ಶೆಡ್ (ಡೀಸೆಲ್), ಸಹಾಯಕ ಲೋಕೋಶೆಡ್ (ಎಲೆಕ್ಟ್ರಿಕಲ್), ಸಹಾಯಕ ಆಪರೇಶನ್ಸ್ (ಎಲೆಕ್ಟ್ರಿಕಲ್), ಸಹಾಯಕ ಟಿಎಲ್ &ಎಸಿ, ಸಹಾಯಕ ಟಿಎಲ್ &ಎಸಿ (ವರ್ಕ್ಶಾಪ್), ಸಹಾಐಕ ಟಿಎಲ್ & ಎಸಿ (ವರ್ಕ್ಶಾಪ್), ಸಹಾಯಕ (ವರ್ಕ್ಶಾಪ್) ಮೆಕಾನಿಕಲ್.
ವಿದ್ಯಾರ್ಹತೆ
• NCVT/SCVT ಯಿಂದ ಮಾನ್ಯತೆ ಪಡೆದ ಶಾಲೆಯಿಂದ 10 ನೇ ತರಗತಿ (ಪ್ರೌಢಶಾಲೆ) ಪೂರ್ಣಗೊಳಿಸಿದ ಅಥವಾ NCVT ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು RRB ಗ್ರೂಪ್ D ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-1)
ದೈಹಿಕ ಸಾಮರ್ಥ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಈ ಕೆಳಗಿನ ಲಿಂಕ್ಗಳಲ್ಲಿ ವಿವರಗಳನ್ನು ಪಡೆಯಬಹುದು- https://sarkariresult.com.cm/railway-rrb-group-d-level-1-recruitment-2026-online/