×
Ad

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ : ಆರ್.ಅಶೋಕ್

Update: 2024-09-12 22:19 IST

ನಾಗಮಂಗಲ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರಕಾರ ಮುಸ್ಲಿಂ ಓಲೈಕೆ ರಾಜಕಾರಣದಿಂದಲೇ ನಾಗಮಂಗಲದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆಯ ಘಟನಾ ಸ್ಥಳಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಘಟನೆಗೆ ಕಾಂಗ್ರೆಸ್ ಸರಕಾರದ ಒಂದು ಕೋಮಿನ ತುಷ್ಟೀಕರಣ ಕಾರಣ ಎಂದು ದೂರಿದರು.

ಗೃಹ ಸಚಿವ ಪರಮೇಶ್ವರ್ ನಾಗಮಂಗಲ ಗಲಭೆಯನ್ನು ಸಣ್ಣ ಘಟನೆ ಎಂದಿದ್ದಾರೆ. ಅವರಿಗೆ ಪೆಟ್ರೋಲ್ ಬಾಂಬ್ ಬದಲಾಗಿ ಮಿಸೈಲ್ ಬೀಳಬೇಕಿತ್ತೆ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಾಗಮಂಗಲ ಕೋಮುಗಲಭೆ ಪೂರ್ವ ನಿಯೋಜಿತವಾಗಿದೆ ಎಂದು ಆರೋಪಿಸಿದರು. ಕೂಡಲೇ ಸಂತ್ರಸ್ತ ಹಿಂದೂಗಳಿಗೆ ರಕ್ಷಣೆ ನೀಡಬೇಕು ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್‍ಕುಮಾರ್, ಡಾ.ಅಶ್ವಥ್ ನಾರಾಯಣ, ಕೆ.ಸುರೇಶ್‍ಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News