ಸಿಜೆಐ ಮೇಲೆ ಶೂ ಎಸೆದ ಪ್ರಕರಣ | ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ಎಫ್‌ಐಆರ್
Update: 2025-10-12 18:06 IST
ರಾಕೇಶ್ ಕಿಶೋರ್ (Photo: ANI)
ಮೈಸೂರು : ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ರವಿವಾರ ಎಫ್.ಐ.ಆರ್ ದಾಖಲಾಗಿದೆ.
ಮೈಸೂರಿನ ವಕೀಲ ಪುನೀತ್ ಎನ್.ಅವರು ಪ್ರಕರಣ ದಾಖಲಿಸಿದ್ದು, ವಕೀಲ ರಾಕೇಶ್ ಕಿಶೋರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023, ಕಲಂ.132, 133 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅ.6 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲ ಸರ್ವೋಚ್ಚ ನ್ಯಾಯಾಲಯ ಕೋಟ್ ಹಾಲ್ ನಂ.1ರಲ್ಲಿ ವಕೀಲರಾದ ರಾಕೇಶ್ ಕಿಶೋರ್, ಮುಖ್ಯ ನ್ಯಾಯಾಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದಿರುವುದು ಭಾರತದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ಸಾಮಾನ್ಯ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾನು ಪ್ರಕರಣ ದಾಖಲಿಸಿರುವುದಾಗಿ ವಕೀಲ ಪುನೀತ್ ಎನ್.ತಿಳಿಸಿದ್ದಾರೆ.