×
Ad

ಮೈಸೂರು ಅರಮನೆ ಮುಂಭಾಗ ಗ್ಯಾಸ್ ಬಲೂನ್ ಸಿಲಿಂಡರ್‌ ಸ್ಪೋಟ : ಕನಿಷ್ಠ ಓರ್ವ ಮೃತ್ಯು, ಐವರಿಗೆ ಗಂಭೀರ ಗಾಯ

Update: 2025-12-25 22:10 IST

ಮೈಸೂರು, ಡಿ.25 : ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಗ್ಯಾಸ್ ಬಲೂನ್ ಸಿಲಿಂಡರ್‌ ಸ್ಪೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಅರಮನೆ ಆವರಣದಲ್ಲಿ ʼಮಾಗಿ ಉತ್ಸವʼ ನಡೆಯುತ್ತಿದ್ದು ಅದನ್ನು ನೋಡಲು ಮತ್ತು ಕ್ರಿಸ್ ಮಸ್ ಹಿನ್ನಲೆಯಲ್ಲಿ ಅರಮನೆ ವಿದ್ಯುತ್ ದೀಪಲಂಕಾರ ವೀಕ್ಷಣೆ ಮಾಡಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ವೇಳೆ ಅರಮನೆ ಮುಂಭಾಗ ಬಲೂನ್ ಗೆ ಗ್ಯಾಸ್ ತುಂಬುವ ನೈಟ್ರೋಜನ್ ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ನಗರದ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಸ್ಪೋಟಕ್ಕೆ ಅಲ್ಲಿದ್ದವರು ಗಾಬರಿಯಾಗಿ ಓಡಲಾರಂಭಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದ್ದು, ಘಟನೆ ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಡಿಸಿಪಿ ಗಳಾದ ಬಿಂದುಮಣಿ, ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News