×
Ad

ಧರ್ಮ ರಾಜಕಾರಣದ ಅರಿವಿದ್ದರಿಂದಲೇ ಅಂಬೇಡ್ಕ‌ರ್ ಮನುಸ್ಮೃತಿ ಸುಟ್ಟಿದ್ದು : ದಿನೇಶ್ ಅಮಿನ್ ಮಟ್ಟು

ಡಿಎಸ್‌ಎಸ್ ಪ್ರತಿರೋಧ ಸಮಾವೇಶ

Update: 2025-12-07 00:14 IST

ಮೈಸೂರು : ಯಾವ ಧರ್ಮ ರಾಜಕಾರಣದ ವಿರುದ್ಧ ನಾವು ಆತಂಕ ಪಡುತ್ತಿದ್ದೇವೋ ಅದು ಬಹುತ್ವ ಭಾರತವನ್ನು ಹಾಳು ಮಾಡುತ್ತದೆ ಎಂಬ ಅರಿವು ಅಂಬೇಡ್ಕರ್ ಅವರಿಗೆ ಆಗಲೇ ಇತ್ತು. ಹಾಗಾಗಿಯೇ ಅವರು ಮನುಸ್ಮತಿಯನ್ನು ಸುಟ್ಟುಹಾಕಿದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿಬ್ಬಾಣ ದಿನದ ಅಂಗವಾಗಿ ಬಹುತ್ವದ ಭಾರತವನ್ನು ಅಸ್ಥಿರಗೊಳಿಸುತ್ತಿರುವ ಧರ್ಮಾಂಧ ರಾಜಕಾರಣದ ವಿರುದ್ಧ ಡಿಎಸ್‌ಎಸ್ ಪ್ರತಿರೋಧ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

1925ರಲ್ಲಿ ಆರೆಸ್ಸೆಸ್ ಪ್ರಾರಂಭವಾಯಿತು. ಇದು ಬಹುತ್ವ ಭಾರತವನ್ನು ನಾಶ ಮಾಡಲಿದೆ ಎಂಬುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಲಿಖಿತ ಸಂವಿಧಾನವನ್ನು ಕೊಟ್ಟರು. ಆದರೆ, ಅಂಬೇಡ್ಕರ್ ಯಾವ ಮನುಸ್ಮತಿಯನ್ನು ಸುಟ್ಟರೋ ಅದು ಬೂದಿಯಿಂದ ಮತ್ತೆ ಎದ್ದು ಬಂದಿದೆ ಎಂದು ಅಮಿನ್ ಮಟ್ಟು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ, ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು, ಪ್ರಗತಿಪರ ಚಿಂತಕ ಡಾ.ಎಸ್.ತುಕಾರಾಂ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಸಂಸ ತಾಲ್ಲೂಕು ಸಂಚಾಲಕ ಕುಮಾರ್ ಕಲ್ಲಹಳ್ಳಿ ಹಾಜರಿದ್ದರು.

ಮೀಸಲಾತಿಯಿಂದ ಗೆದ್ದು ಬರುವ ದಲಿತ ಶಾಸಕರು ದಲಿತ ಸಮುದಾಯದ ಕೆಲಸ ಮಾಡುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಾರಣ ಅವರು ಬರೀ ದಲಿತರ ಮತದಿಂದಷ್ಟೆ ಗೆದ್ದು ಬಂದಿರುವುದಿಲ್ಲ, ಮೇಲ್ಜಾತಿಯವರ ಮತಗಳನ್ನು ಪಡೆದು ಗೆದ್ದು ಬಂದಿರುತ್ತಾರೆ. ಹಾಗಾಗಿಯೇ ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ಬೇಕೆಂದು ಕೇಳಿದ್ದರು.

ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತ

ಮೀಸಲಾತಿ ಇಲ್ಲದಿದ್ದರೆ ರಾಜಕೀಯದ ಜೊತೆಗೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿಯೂ ಸ್ವಾವಲಂಭಿಗಳಾಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹತ್ವವನ್ನು ಹೊಂದಿರುವ ಸಂವಿಧಾನವನ್ನು ದಮನ ಮಾಡಲು ಹೊರಟಿರುವ ಕೆಲವು ಮತಾಂಧ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಂದಾಗಿ ಸಂಘಟಿತ ಹೋರಾಟ ಮಾಡಬೇಕಾದ ಅಗತ್ಯವಿದೆ.

ಎ.ಆರ್.ಕೃಷ್ಣಮೂರ್ತಿ, ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News