ಮೈಸೂರು : ಚುನಾವಣಾ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯನ್ನು ಬಿಜೆಪಿಯವರು ತಿಥಿ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ದೇಶದ ಚುನಾವಣಾ ವ್ಯವಸ್ಥೆಗೆ ಅಂಬೇಡ್ಕರ್ ಬದ್ರ ಬುನಾದಿ ಹಾಕಿಕೊಟ್ಟಿದ್ದರು. ಬಿಜೆಪಿಯವರು ಅದರ ತಿಥಿ ಮಾಡುತ್ತಿದ್ದಾರೆ. ಆದರೆ ಜನರು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಹೇಳಿದರು.

ಅಹಿಂದ ಸಂಘಟನೆಯಲ್ಲಿ ಯಾವುದೇ ಬಿರುಕಿಲ್ಲ, ಎಲ್ಲವೂ ಚೆನ್ನಾಗಿದೆ ಮತ್ತು ಎಲ್ಲರಿಗೂ ಒಳ್ಳೆಯದಾಗಬೇಕು. ಅಹಿಂದದ ಎಲ್ಲರೂ ಒಟ್ಟಿಗೆ ಇದ್ದಾರೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತದೆ.ನಮ್ಮ ಸರಕಾರವಂತೂ ಅಹಿಂದ ಬಗ್ಗೆ ಹೆಚ್ಚು ಕಾಳಜಿ ವಹಿಸಿದೆ ಎಂದು ಹೇಳಿದರು.

‘ಬುದ್ಧಿ ಇಲ್ಲದವರಿಗೆ ಉತ್ತರಿಸಿ ಅಭ್ಯಾಸವಿಲ್ಲ’

ತಲೆಯಲ್ಲಿ ಬುದ್ಧಿ ಇಲ್ಲದವರು ಮಾತನಾಡಿರುವುದಕ್ಕೆಲ್ಲಾ ನನಗೆ ಉತ್ತರಿಸಿ ಅಭ್ಯಾಸವಿಲ್ಲ. ನಾಲ್ಕು ಒಳ್ಳೆ ಕೆಲಸ ಆಗಿರುವ ಬಗ್ಗೆ ಮಾತಾಡೋಣ, ಯಾರೋ ಏನೊ ಹೇಳುತ್ತಾರೆ ಎಂದರೆ ಅದಕ್ಕೆಲ್ಲಾ ಉತ್ತರಕೊಡಬಾರದು, ಅವರ ಮೇಲೆ ಪ್ರಕರಣ ದಾಖಲಾಗಿದ್ದರೆ ಕಾನೂನು ನೋಡಿಕೊಳ್ಳುತ್ತದೆ. ಯಾವಾಗಲೂ ನಾವು ಒಳ್ಳೆ ಕೆಲಸ ಮಾಡಬೇಕು, ಕೆಟ್ಟದನ್ನು ಮರೆತು ಮುಂದೆ ಹೋಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor