ಮೈಸೂರು | ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್‌ನ ಭೀಕರ ಹತ್ಯೆ
Update: 2025-05-05 15:01 IST
ಕಾರ್ತಿಕ್(32)
ಮೈಸೂರು : ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ವರುಣಾ ತಾಲ್ಲೂಕಿನ ಹೋಟೆಲ್ ವೊಂದರ ಮುಂಭಾಗ ರವಿವಾರ ತಡರಾತ್ರಿ ನಡೆದಿದೆ.
ಮೈಸೂರು ನಹರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್(32) ಕೊಲೆಯಾದ ವ್ಯಕ್ತಿ.
ರವಿವಾರ ತಡರಾತ್ರಿ 1.45 ಗಂಟೆ ಸಮಯದಲ್ಲಿ ವರುಣಾ ಬಳಿಯ ಹೋಟೆಲ್ ಮುಂಭಾಗ ಸ್ಕೂಟರ್ ಮತ್ತು ಕಾರಿನಲ್ಲಿ ಬಂದ ಆರು ಜನರ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹಳೆ ವೈಷಮ್ಯದಿಂದ ಈ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಕಾರ್ತಿಕ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.