×
Ad

ನಂಜನಗೂಡು | ಜಮೀನಿನಲ್ಲಿ ತೋಡಿದ್ದ ಹಳ್ಳಕ್ಕೆ ಬಿದ್ದ ಕಾಡಾನೆ: ಜೆಸಿಬಿ ಮೂಲಕ ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

Update: 2025-05-08 16:03 IST

ಮೈಸೂರು : ಜಮೀನಿನಲ್ಲಿ ತೋಡಿದ್ದ ಆಳವಾದ ಗುಂಡಿಗೆ ಬಿದ್ದ ಕಾಡಾನೆಯೊಂದು ಮೇಲೇಳಲು ಆಗದೆ ಪರದಾಡಿದ ಘಟನೆ ಬಂಡೀಪುರ ಅರಣ್ಯ ವಾಪ್ತಿಯ ನಂಜನಗೂಡು ತಾಲ್ಲೂಕು ಹಂಚೀಪುರ ಗ್ರಾಮದಲ್ಲಿ ನಡೆದಿದೆ.

ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬುಧವಾರ ಬಂದ ಕಾಡಾನೆ  ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವವರ ಜಮೀನನಲ್ಲಿ ತೋಡಲಾಗಿದ್ದ ಗುಂಡಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಹಳ್ಳಕ್ಕೆ ಬಿದ್ದಿದ್ದ ಕಾಡಾನೆಯನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು.

ಹಳ್ಳದಲ್ಲಿ ಬಿದ್ದು ಗಾಬರಿಗೊಂಡಿದ್ದ ಕಾಡಾನೆ ಮೇಲಕ್ಕೆ ಬರುತ್ತಿದ್ದಂತೆ ಜನರ ಬಳಿ ನುಗ್ಗಲು ಯತ್ನಿಸಿತು. ಆಗ ಗ್ರಾಮಸ್ಥರು ಶಿಳ್ಳೆ ಚಪ್ಪಾಳೆ ಹೊಡೆದು ಏರಿದ ಧನಿಯಲ್ಲಿ ಕೂಗಿದರು. ಅರಣ್ಯ ಇಲಾಖೆಯವರ ಸಹಾಯದಿಂದ ಆನೆ ಕಾಡಿನತ್ತ ತೆರಳುವಂತೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News