×
Ad

ಮೈಸೂರಿನಲ್ಲಿ ಸರಣಿ ಅಪಘಾತ : ಆರು ಕಾರುಗಳು ಜಖಂ

Update: 2024-06-23 19:57 IST

ಮೈಸೂರು : ಸರಣಿ ಅಪಘಾತದಲ್ಲಿ ಆರು ಕಾರುಗಳು ಜಖಂ ಗೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಕಳಘಟ್ಟ ಗ್ರಾಮದ ಬಳಿ ಸಂಭವಿಸಿದೆ.

ಒಂದರ ಹಿಂದೆ ಒಂದರಂತೆ ಬಂದ ಆರು ಕಾರುಗಳು ಢಿಕ್ಕಿ ಹೊಡೆದು ನಿಂತಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಕೊಳಘಟ್ಟ ಗ್ರಾಮದ ಹುಣಸೂರು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಮುಂದೆ ತೆರಳುತ್ತಿದ್ದ ಕಾರು ಚಾಲಕ ಯಾವುದೇ ಮುನ್ಸೂಚನೆ ನೀಡದೆ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಇದರಿಂದ ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೆ ಒಂದು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News