×
Ad

ಎಸೆಸೆಲ್ಸಿ ಫಲಿತಾಂಶ | ಮೈಸೂರಿನ ತಾನ್ಯಾ ಆರ್., ಧನುಷ್‌ಗೆ 625 ಅಂಕ

Update: 2025-05-02 19:12 IST

 ತಾನ್ಯಾ ಆರ್., ಧನುಷ್‌

ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರು ಜಿಲ್ಲೆ ರಾಜ್ಯಕ್ಕೆ 15ನೇ ಸ್ಥಾನ ಪಡೆದುಕೊಂಡಿದೆ. 

ಕಳೆದ ಬಾರಿ ಶೇ.87.01ರಷ್ಟು ಫಲಿತಾಂಶ ಪಡೆದುಕೊಂಡು 7ನೇ ಸ್ಥಾನ ಅಲಂಕರಿಸಿದ್ದ ಮೈಸೂರು ಜಿಲ್ಲೆ, ಈ ಬಾರಿ ಶೇ.68.39ರಷ್ಟು ಫಲಿತಾಂಶ ಪಡೆದುಕೊಂಡಿದೆ. 

ಮೈಸೂರಿನ ಇಬ್ಬರು ರಾಜ್ಯಕ್ಕೆ ಪ್ರಥಮ :

ಮೈಸೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಭಾರತೀಯ ವಿದ್ಯಾಭವನ ಶಾಲೆಯ ತಾನ್ಯಾ ಆರ್. ಮತ್ತು ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿ ಧನುಷ್ ಪೂರ್ಣ ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಧನುಷ್ ಅವರು ಶಿವಕುಮಾರ್ ಮತ್ತು ಸವಿತಾ ದಂಪತಿಯ ಪುತ್ರ.

ತಾನ್ಯಾ ಆರ್.ಅವರು ಎಚ್.ನಾರಾಯಣಸ್ವಾಮಿ, ಎಚ್.ಎಂ.ಮಹೇಶ್ವರಿ ದಂಪತಿಯ ಪುತ್ರಿ.

620ಕ್ಕಿಂತ ಹೆಚ್ಚು ಅಂಕ ಪಡೆದ 43 ವಿದ್ಯಾರ್ಥಿಗಳು:

ಜಿಲ್ಲೆಯಲ್ಲಿ 43 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ನಾಲ್ವರಿಗೆ 624, ಐವರಿಗೆ 623, ಹನ್ನೊಂದು ವಿದ್ಯಾರ್ಥಿಗಳಿಗೆ 622, ಒಂಬತ್ತು ವಿದ್ಯಾರ್ಥಿಗಳಿಗೆ 621, ಹನ್ನೆರಡು ವಿದ್ಯಾರ್ಥಿಗಳು 620 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News