×
Ad

ಮೈಸೂರು| ಯುವತಿಯ ಸಾಮೂಹಿಕ ಅತ್ಯಾಚಾರ; ಪ್ರಕರಣ ದಾಖಲು

Update: 2024-11-04 23:21 IST

ಸಾಂದರ್ಭಿಕ ಚಿತ್ರ (PTI)

ಮೈಸೂರು: ಯುವತಿಯೋರ್ವಳ ಮೇಲೆ ಯುವಕರಿಬ್ಬರು ಅತ್ಯಾಚಾರ ಎಸಗಿರುವ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಹೂಟಗಳ್ಳಿಯ ಶ್ರೇಯಸ್ ಮತ್ತು ಸಕಲೇಶಪುರದ ಸಲಾಂಕ್ ಆರೋಪಿಗಳು ಎಂದು ತಿಳಿದು ಬಂದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಚನ್ನಪಟ್ಟಣ ಮೂಲದ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಿರುವ ಯುವತಿ ನ.2 ರಾತ್ರಿ ವಿಜಯನಗರದ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗಿದ್ದು, ಅಲ್ಲಿ ಮೈಸೂರಿನ ಹೂಟಗಳ್ಳಿ ಯುವಕ ಶ್ರೇಯಸ್ ಎಂಬಾತನ ಪರಿಚಯವಾಗಿದೆ. ಯುವತಿ ಪಿ.ಜಿ ಯಲ್ಲಿ ವಾಸವಾಗಿದ್ದು ರಾತ್ರಿಯಾಗಿದ್ದರಿಂದ ಪಿ.ಜಿ.ಗೆ ಹೋಗಲು ಸಾಧ್ಯವಿಲ್ಲ ಎಂದು ಅಲ್ಲೇ ಹತ್ತಿರದಲ್ಲಿದ್ದ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದಾಳೆ. ಹೋಟೆಲ್ ನಲ್ಲಿ ಪರಿಚಯವಾಗಿದ್ದ ಶ್ರೇಯಸ್ ರೂಮ್ ಗೆ ಬಂದವನೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಆತನ ಸ್ನೇಹಿತ ಸಕಲೇಶಪುರದ ಸಲಾಂಕ್ ಎಂಬ ಯುವಕ ಸಹ ರೂಮ್ ಗೆ ಬಂದು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಅತ್ಯಾಚಾರಕ್ಕೊಳಗಾದ ಯುವತಿ ಇಬ್ಬರ ಮೇಲೆ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಯುವಕರ ಪತ್ತೆಗಾಗಿ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News