×
Ad

ಅತಿ ವೇಗದ ಆಕಾಶ ವಾಹನ ‘ಅಭ್ಯಾಸ್’ನ ಯಶಸ್ವಿ ಪ್ರಾಯೋಗಿಕ ಪರೀಕ್ಷೆ

Update: 2024-06-28 22:42 IST

PC: drdo.gov.in

ಭುವನೇಶ್ವರ : ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅತಿ ವೇಗದ ಆಕಾಶ ವಾಹನ ‘ಅಭ್ಯಾಸ್’ನ ಪ್ರಾಯೋಗಿಕ ಪರೀಕ್ಷೆಗಳನ್ನು ಕಳೆದ ಎರಡು ದಿನಗಳಲ್ಲಿ ಯಶಸ್ವಿಯಾಗಿ ನಡೆಸಿದೆ.

ಮಾನವರಹಿತ ಆಕಾಶ ವಾಹನದ ಪರೀಕ್ಷಾರ್ಥ ಉಡಾವಣೆಯನ್ನು ಒಡಿಶಾ ಕರಾವಳಿಯಲ್ಲಿರುವ ಪರೀಕ್ಷಾ ವಲಯದಲ್ಲಿ ನಡೆಸಲಾಗಿದೆ. ಇದರೊಂದಿಗೆ ‘ಅಭ್ಯಾಸ್’ 10 ಸರಣಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಈ ವಾಹನದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.

ಸುಧಾರಿತ ರಾಡಾರ್ ವ್ಯವಸ್ಥೆ ಹಾಗೂ ದೃಶ್ಯ ಮತ್ತು ಇನ್ಫ್ರಾರೆಡ್ ವ್ಯವಸ್ಥೆಗಳ ಮೂಲಕ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪರೀಕ್ಷೆಗಳ ವೇಳೆ, ಬೂಸ್ಟರ್ಗಳ ಸುರಕ್ಷಿತ ಬಿಡುಗಡೆ, ಲಾಂಚರ್ನಿಂದ ದೂರವಿರುವುದು ಮತ್ತು ಧಾರಣ ಸಾಮರ್ಥ್ಯ ಸೇರಿದಂತೆ ಯೋಜನೆಯ ವಿವಿಧ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News