ಡಿ.ಕೆ. ಸುರೇಶ್ ಸೇರಿದಂತೆ ಮತ್ತೆ ಮೂವರು ಸಂಸದರು ಅಮಾನತು
Update: 2023-12-21 15:57 IST
Photo: PTI
ಹೊಸದಿಲ್ಲಿ: ಸಂಸತ್ತಿನಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಸೇರಿದಂತೆ ಮತ್ತೆ ಮೂವರು ಸಂಸದರನ್ನು ಅಮಾನತು ಮಾಡಲಾಗಿದೆ.
ಸಂಸದರಾದ ಡಿಕೆ ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಗುರುವಾರ ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಂಡ ಒಟ್ಟು ಸದಸ್ಯರ ಸಂಖ್ಯೆ 146 ಕ್ಕೆ ತಲುಪಿದೆ.