×
Ad

ರಾಷ್ಟ್ರ ರಾಜಧಾನಿಯಲ್ಲಿ ನಡುಗುವ ಚಳಿ; ಮೂರು ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು

Update: 2026-01-13 07:59 IST

PC: screengrab/ x.com/PTI_News

ಹೊಸದಿಲ್ಲಿ: ಶೀತಗಾಳಿಯಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ತಾಪಮಾನ ಮತ್ತಷ್ಟು ಕುಸಿದಿದೆ. ಸಫ್ದರ್ಜಂಗ್ ನಲ್ಲಿ 3.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಮೂರು ವರ್ಷಗಳಲ್ಲೇ ಕನಿಷ್ಠ ಹಾಗೂ ವಾಡಿಕೆ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಕಡಿಮೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ದೆಹಲಿಯ ಪ್ರಮುಖ ಚಳಿಮಾಪನಾ ಕೇಂದ್ರವಾಗಿರುವ ಸಫ್ದರ್ಜಂಗ್ ನಲ್ಲಿ 2023ರ ಜನವರಿ 18ರಂದು 2.6 ಡಿಗ್ರಿ ತಾಪಮಾನ ದಾಖಲಾಗಿತ್ತು. ಬುಧವಾರ ವರೆಗೂ ಇದೇ ಉಷ್ಣಾಂಶ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆ ಬಳಿಕ ಪಶ್ಚಿಮ ಪ್ರಕ್ಷುಬ್ಧತೆಯ ಪ್ರಭಾವ ಈ ಭಾಗದ ಮೇಲೆ ಆಗಲಿದೆ ಎಂದು ಹೇಳಲಾಗಿದೆ.

ಲೋಧಿ ರಸ್ತೆ ಪ್ರದೇಶ ರಾಜಧಾನಿಯ ಅತ್ಯಂತ ಶೀತ ಪ್ರದೇಶವಾಗಿದ್ದು, 3 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಅಯನಗರದಲ್ಲಿ 3.2 ಡಿಗ್ರಿ ಹಾಗೂ ಪಾಲಂನಲ್ಲಿ 3.3 ಡಿಗ್ರಿ ತಾಪಮಾನದಾಖಲಾಗಿದೆ. ದೆಹಲಿಯ ಹಲವು ಮಾಪನಾ ಕೇಂದ್ರಗಳಲ್ಲಿ ಸೋಮವಾರ ಶೀತಗಾಳಿಯ ಅನುಭವ ಆಗಿದೆ. ಇದು ಮುಂದಿನ ಎರಡು ದಿನಗಳ ಕಾಲ ಮುಂದವರಿಯಲಿದೆ ಎಂದು ಐಎಂಡಿ ವಿಜ್ಞಾನಿ ಕೃಷ್ಣ ಮಿಶ್ರಾ ಹೇಳಿದ್ದಾರೆ.

ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಷಿಯಸ್ ಗಿಂತ ಕಡಿಮೆ ಇರುವ ಹಾಗೂ ವಾಡಿಕೆ ತಾಪಮಾನಕ್ಕಿಂತ 4.5 ಡಿಗ್ರಿಯಷ್ಟು ಕಡಿಮೆ ಉಷ್ಣಾಂಶ ಇರುವ ಪರಿಸ್ಥಿತಿಯನ್ನು ಶೀತಗಾಳಿ ಎಂದು ಪರಿಗಣಿಸಲಾಗುತ್ತದೆ. ಕನಿರ್ಷಠ ತಾಪಮಾನ ವಾಡಿಕೆಗಿಂತ 4 ಡಿಗ್ರಿಯಷ್ಟು ಕಡಿಮೆ ಇದ್ದಾಗ ಕೂಡಾ ಶೀತ ಅಲೆ ಎಂದು ಕರೆಯಲಾಗುತ್ತದೆ. ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ಸಫ್ದರ್ಜಂಗ್ ನಲ್ಲಿ ಶೀತ ಅಲೆ ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News