×
Ad

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳಿಗೆ 25% ಹೆಚ್ಚುವರಿ ಸುಂಕ: ಟ್ರಂಪ್

Update: 2026-01-13 07:52 IST

ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್: ಇರಾನ್ ಜತೆ ವಹಿವಾಟು ನಡೆಸುವ ಎಲ್ಲ ದೇಶಗಳ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಇರಾನ್ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.

ಈ ಸುಂಕ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ತಕ್ಷಣದಿಂದ ಜಾರಿಯಾಗುವಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜತೆ ವ್ಯವಹಾರ ನಡೆಸುವ ಯಾವುದೇ ದೇಶಗಳು ಅಮೆರಿಕದ ಜತೆ ವಹಿವಾಟು ನಡೆಸುವ ವೇಳೆ ಶೇಕಡ 25ರಷ್ಟು ಸುಂಕವನ್ನು ತೆರಬೇಕಾಗುತ್ತದೆ" ಎಂದು ಜಾಲತಾಣ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಈ ಆದೇಶ ಅಂತಿಮ ಹಾಗೂ ನಿರ್ಣಯಾತ್ಮಕ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್, "ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಉತ್ತಮ ಅಂಶವೆಂದರೆ, ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿ ಇರಿಸಿರುತ್ತಾರೆ. ಹಲವು ಆಯ್ಕೆಗಳಲ್ಲಿ ವಾಯುದಾಳಿ ಒಂದು; ಕಮಾಂಡ್ ಇನ್ ಚೀಫ್ ಮುಂದೆ ಹಲವು ಆಯ್ಕೆಗಳಿವೆ. ಅಧ್ಯಕ್ಷರಿಗೆ ರಾಜತಾಂತ್ರಿಕತೆ ಯಾವಾಗಲೂ ಮೊದಲ ಆಯ್ಕೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News