×
Ad

ಏರ್ ಇಂಡಿಯಾ ವಿಮಾನ ದುರಂತ; ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂ. ಮಧ್ಯಂತರ ಪರಿಹಾರ ಬಿಡುಗಡೆ

Update: 2025-06-14 20:39 IST

PC : PTI 

ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಪತನಗೊಂಡು ಪ್ರಯಾಣಿಕರು ಸೇರಿದಂತೆ ಮೃತಪಟ್ಟ ಕನಿಷ್ಠ 274 ಮಂದಿಯ ಕುಟುಂಬಕ್ಕೆ ಏರ್ ಇಂಡಿಯಾವು 25 ಲಕ್ಷ ರೂ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿನ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿರುವ ಏರ್ ಇಂಡಿಯಾ,”ಇತ್ತೀಚಿನ ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬದೊಂದಿಗೆ ಏರ್ ಇಂಡಿಯಾವು ಒಗ್ಗಟ್ಟಿನಿಂದ ನಿಲ್ಲುತ್ತದೆ. ಈ ಕಷ್ಟಕರ ಸಮಯದಲ್ಲಿ ಅವರಿಗೆ ಆರೈಕೆ ಮತ್ತು ಸಹಕಾರವನ್ನು ನೀಡಲು ನಮ್ಮ ತಂಡಗಳು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ”.

“ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಂತಾಪಗಳು. ಅವರ ನೋವಿನಲ್ಲಿ ನಾವು ಜೊತೆಗಿದ್ದೇವೆ. ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿ, ಏರ್ ಇಂಡಿಯಾವು ಮೃತರ ಕುಟುಂಬಗಳಿಗೆ ಮತ್ತು ಬದುಕುಳಿದವರಿಗೆ ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು 25 ಲಕ್ಷ ರೂ ಅಥವಾ ಸುಮಾರು 21,000 ಪೌಂಡ್ಸ್ ಮಧ್ಯಂತರ ಪರಿಹಾರವನ್ನು ಒದಗಿಸಲಿದೆ. ಟಾಟಾ ಸನ್ಸ್ ಈಗಾಗಲೇ 1 ಕೋಟಿ ರೂ ಅಥವಾ ಸುಮಾರು 85,000 ಪೌಂಡ್ಸ್ ಪರಿಹಾರ ಘೋಷಿಸಿದೆ”, ಎಂದು ಏರ್ ಇಂಡಿಯಾವು ತನ್ನ ಪೋಸ್ಟ್ ನಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News