×
Ad

‘ಜನನಾಯಗನ್’ ಸೆನ್ಸಾರ್ ವಿವಾದ: ಜ. 27ರಂದು ಮದ್ರಾಸ್ ಹೈಕೋರ್ಟ್‌ನಿಂದ ತೀರ್ಪು

Update: 2026-01-23 22:09 IST

ನಟ ವಿಜಯ್ | Photo Credit : IMDb

ಚೆನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ನಟಿಸಿರುವ ಬಹು ನಿರೀಕ್ಷಿತ ‘ಜನನಾಯಗನ್’ ಚಿತ್ರಕ್ಕೆ 16 ವರ್ಷ ಮೇಲ್ಪಟ್ಟವರು ವೀಕ್ಷಿಸಲು ಅನುವಾಗುವಂತೆ ಯು/ಎ ಪ್ರಮಾಣ ಪತ್ರ ನೀಡುವಂತೆ ಜ. 9ರಂದು ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಲ್ಲಿಸಿರುವ ಮೇಲ್ಮನವಿಯ ಕುರಿತು ಜನವರಿ 27ರಂದು ತೀರ್ಪು ಪ್ರಕಟಿಸಲು ಮದ್ರಾಸ್ ಹೈಕೋರ್ಟ್ ಪ್ರಥಮ ವಿಭಾಗೀಯ ಪೀಠ ಸಜ್ಜಾಗಿದೆ.

ಮುಖ್ಯ ನ್ಯಾಯಮೂರ್ತಿ ಮಣೀಂದರ್ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನು ಒಳಗೊಂಡ ನ್ಯಾಯಪೀಠ, ಜನವರಿ 20ರಂದು ಕಾಯ್ದಿರಿಸಿದ್ದ ತೀರ್ಪನ್ನು ಜನವರಿ 27ರಂದು ಪ್ರಕಟಿಸಲಿದೆ. ಸಿಬಿಎಫ್‌ಸಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ. ಆರ್. ಸುಂದರೇಶನ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಪರ ಹಿರಿಯ ವಕೀಲ ಸತೀಶ್ ಪರಾಸರನ್, ಅವರಿಗೆ ನೆರವು ನೀಡಿದ ವಿಜಯನ್ ಸುಬ್ರಮಣಿಯನ್ ಅವರ ವಾದ–ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ವಾದ–ಪ್ರತಿವಾದದ ವೇಳೆ, ಸಿಬಿಎಫ್‌ಸಿಗೆ ಪ್ರತಿಪ್ರಮಾಣ ಪತ್ರ ಸಲ್ಲಿಸಲು ಅವಕಾಶ ನೀಡದೆ, ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿ ವಿಲೇವಾರಿಯಲ್ಲಿ ಏಕಸದಸ್ಯ ಪೀಠದ ತೀರ್ಪು ಸಮರ್ಥನೀಯವಾಗಿದೆಯೇ ಎಂಬುದನ್ನು ದಾಖಲಿಸಲು ಮಾತ್ರ ಮೊದಲಿಗೆ ತಮ್ಮ ವಾದಗಳನ್ನು ಮಂಡಿಸಬೇಕೆಂದು ವಿಭಾಗೀಯ ನ್ಯಾಯಪೀಠ ಎರಡೂ ಕಡೆಯ ವಾದಿಗಳಿಗೆ ಒತ್ತಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News