×
Ad

ಝುಬೀನ್ ಗರ್ಗ್ ಪ್ರಕರಣ | ಅಸ್ಸಾಂ ಪೊಲೀಸರು ಸಿಂಗಾಪುರದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ: ಸಿಎಂ ಹಿಮಂತ ಬಿಸ್ವಾ ಶರ್ಮಾ

Update: 2025-10-05 12:12 IST

ಹಿಮಂತ ಬಿಸ್ವಾ ಶರ್ಮಾ (File Photo: PTI)

ಗುವಾಹಟಿ : ಗಾಯಕ ಝುಬೀನ್ ಗರ್ಗ್ ಅವರ ನಿಗೂಢವಾಗಿ ಮೃತಪಟ್ಟ ಘಟನೆ ಕುರಿತು ತನಿಖೆ ನಡೆಸಲು ಅಸ್ಸಾಂ ಪೊಲೀಸರು ಸಿಂಗಾಪುರಕ್ಕೆ ತೆರಳಲು ಸಾಧ್ಯವಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಗರ್ಗ್ ಅವರ ಕುಟುಂಬವನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ಶರ್ಮಾ, ಝುಬೀನ್ ಗರ್ಗ್ ಅವರ ಕೊನೆಯ ಕ್ಷಣಗಳಲ್ಲಿ ವಿಹಾರ ನೌಕೆಯಲ್ಲಿದ್ದ ಅಸ್ಸಾಂನ ಜನರು ಮುಂದೆ ತನಿಖೆಗೆ ಸಹಕರಿಸಬೇಕು. ಇಲ್ಲವಾದಲ್ಲಿ ಪ್ರಕರಣದ ನಂಟನ್ನು ಬಯಲು ಮಾಡಲು ಸಾಧ್ಯವಿಲ್ಲ. ನಮ್ಮ ಮುಖ್ಯ ಚಿಂತೆ ಏನೆಂದರೆ ಸಿಂಗಾಪುರದಲ್ಲಿ ವಾಸಿಸುವ ಈ ಜನರು ತನಿಖೆಗೆ ಸಹಕರಿಸಲು ಮುಂದೆ ಬರುತ್ತಾರೋ ಎಂಬುದಾಗಿದೆ. ಅವರು ಮುಂದೆ ಬರದಿದ್ದರೆ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

"ಅಸ್ಸಾಂ ಪೊಲೀಸರು ಸಿಂಗಾಪುರಕ್ಕೆ ಹೋಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಅದು ನನ್ನ ಅಧಿಕಾರ ವ್ಯಾಪ್ತಿಯಲ್ಲಿಲ್ಲ. ಅವರು ಇಲ್ಲಿಗೆ ಬರದ ಹೊರತು, ಪ್ರಕರಣದ ನಿಜಾಂಶ ಪತ್ತೆ ಹಚ್ಚಲು ಸಾಧ್ಯವಾಗದು" ಎಂದು ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಹೇಳಿದರು.

ಸಿಂಗಾಪುರದಲ್ಲಿ ಆಯೋಜನೆಗೊಂಡಿದ್ದ ಈಶಾನ್ಯ ಭಾರತ ಹಬ್ಬದಲ್ಲಿ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸುವುದಕ್ಕೂ ಹಿಂದಿನ ದಿನ ನೀರಿನಲ್ಲಿ ಮುಳುಗಿ ಅಸ್ಸಾಂ ಗಾಯಕ ಝುಬೀನ್ ಗರ್ಗ್ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಪೊಲೀಸರು, ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕಿ ಅಮೃತಪರ್ವ ಮಹಾಂತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News