×
Ad

ಓಂ ಬಿರ್ಲಾ ಲೋಕಸಭಾ ಸ್ಪೀಕರ್‌ ಆಗಿ ಆಯ್ಕೆ

Update: 2024-06-26 11:24 IST

Screengrab:X

ಹೊಸದಿಲ್ಲಿ: ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹಾಗೂ ಕಳೆದ ಲೋಕಸಭೆಯಲ್ಲೂ ಸ್ಪೀಕರ್‌ ಆಗಿದ್ದ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಇಂದು ಧ್ವನಿ ಮತದಿಂದ ಮತ್ತೆ ಸ್ಪೀಕರ್‌ ಆಗಿ ಆಯ್ಕೆಯಾದರು.

ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ ಪಕ್ಷದ ಸುರೇಶ್‌ ಅವರನ್ನು ತನ್ನ ಅಭ್ಯರ್ಥಿಯನ್ನಾಗಿಸಿತ್ತು.

ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆಯಾದ ನಂತರ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಬಳಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಹಸ್ತಲಾಘವ ನೀಡಿದ್ದಾರೆ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಲೋಕಸಭಾ ಸ್ಪೀಕರ್‌ ಹುದ್ದೆಗೆ ನಡೆದ ಮೂರನೇ ಚುನಾವಣೆ ಇದಾಗಿದೆ.

ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾಗೆ 297 ಸಂಸದರ ಬೆಂಬಲವಿದ್ದರೆ ವಿಪಕ್ಷಗಳ ಅಭ್ಯರ್ಥಿಗೆ 232 ಸಂಸದರ ಬೆಂಬಲವಿತ್ತು.

ಸಾಮಾನ್ಯವಾಗಿ ಲೋಕಸಭಾ ಸ್ಪೀಕರ್‌ ಆಯ್ಕೆ ಸಹಮತದಿಂದ ನಡೆಯುತ್ತದೆಯಾದರೂ ಈ ಬಾರಿ ಉಪ ಸ್ಪೀಕರ್‌ ಹುದ್ದೆಯನ್ನು ವಿಪಕ್ಷಗಳಿಗೆ ನೀಡಬೇಕೆಂಬ ಆಗ್ರಹಕ್ಕೆ ಸರ್ಕಾರ ಮನ್ನಣೆ ನೀಡದೇ ಇದ್ದ ಕಾರಣ ವಿಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News