×
Ad

ಲೋಕಸಭೆ ಚುನಾವಣೆ : 16 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಎಸ್‌ಪಿ

Update: 2024-03-24 20:03 IST

Photo: PTI 

ಲಕ್ನೋ: ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಿಗೆ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ.

ಪಕ್ಷ ಈ ಹಿಂದೆ ಜಿಲ್ಲಾ ಮಟ್ಟದ ಅಭ್ಯರ್ಥಿಗಳನ್ನು ಬಹಿರಂಗಪಡಿಸಿತ್ತು. ಈ ಅಭ್ಯರ್ಥಿಗಳಲ್ಲಿ ಶರಣಪುರದಿಂದ ಮಜಿದ್ ಅಲಿ, ಕೈರಾನಾದಿಂದ ಶ್ರೀಪಾಲ್ ಸಿಂಗ್, ಮುಜಾಫರ್‌ನಗರದಿಂದ ದಾರಾ ಸಿಂಗ್ ಪ್ರಜಾಪತಿ, ಬಿಜ್ನೂರ್ ನಿಂದ ವಿಜಯೇಂದ್ರ ಸಿಂಗ್, ನಾಗಿನಾದಿಂದ ಸುರೇಂದ್ರ ಪಾಲ್ ಸಿಂಗ್ ಹಾಗೂ ಮೊರದಾಬಾದ್ ನಿಂದ ಮುಹಮ್ಮದ್ ಇರ್ಫಾನ್ ಶಫಿ ಸೇರಿದ್ದಾರೆ.

ಝೀಶನ್ ಖಾನ್ ಅವರು ರಾಮ್ಪುರದಿಂದ, ಶೌಲತ್ ಅಲಿ ಸಂಭಾಲ್ ನಿಂದ, ಮೊಝಾಹಿದ್ ಹುಸೈನ್ ಅಮ್ರೋಹದಿಂದ, ದೇವವೃತ ತ್ಯಾಗಿ ಮೀರತ್ ನಿಂದ ಹಾಗೂ ಪ್ರವೀಣ್ ಬನ್ಸಾಲ್ ಬಾಘೇಪತ್ ನಿಂದ ಸ್ಪರ್ಧಿಸಲಿದ್ದಾರೆ.

ರಾಜೇಂದ್ರ ಸಿಂಗ್ ಸೋಲಂಕಿ ಗೌತಮ್ ಬುದ್ಧ ನಗರ, ಗಿರೀಶ್ ಚಂದ್ರ ಜಾಟವ್ ಬುಲಂದ್ಶಹರ್, ಅಬಿದ್ ಅಲಿ ಆವೋನ್ಲಾ, ಅನೀಸ್ ಅಹ್ಮದ್ ಖಾನ್ ಆಲಿಯಾಸ್ ಫೂಲ್ ಬಾಬು ಪಿಲಿಬಿಟ್ ಹಾಗೂ ದೋಡಾ ರಾಮ್ ವರ್ಮಾ ಶಹಜಹಾನ್ಪುರದ ಅಭ್ಯರ್ಥಿಯಾಗಿದ್ದಾರೆ.

ಲೋಕಸಭಾ ಚುನಾವಣೆ ಎಪ್ರಿಲ್ 19ರಂದು ಆರಂಭವಾಗಲಿದ್ದು, 7 ಹಂತಗಳಲ್ಲಿ ನಡೆಯಲಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News