×
Ad

ಮುಂಬೈ : ಸಾಂತಾಕ್ರೂಝ್ ನ ವಾಣಿಜ್ಯ ಕೇಂದ್ರದಲ್ಲಿ ಅಗ್ನಿ ಅವಘಡ; 37 ಮಂದಿಯ ರಕ್ಷಣೆ

Update: 2024-02-26 19:59 IST

Photo:www.ndtv.com

ಮುಂಬೈ: ಇಲ್ಲಿನ ಸಾಂತಾಕ್ರೂಜ್ ಉಪನಗರದಲ್ಲಿರುವ ಎರಡು ಅಂತಸ್ತಿನ ವಾಣಿಜ್ಯ ಕೇಂದ್ರದಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, 37 ಜನರನ್ನು ರಕ್ಷಿಸಲಾಗಿದೆ ಎಂದು ndtv ವರದಿ ಮಾಡಿದೆ.

ಮಿಲನ್ ಸುರಂಗಮಾರ್ಗದ ಬಳಿ ಇರುವ ಆಪ್ಷನ್ಸ್ ಕಮರ್ಷಿಯಲ್ ಸೆಂಟರ್‌ನ ಟೆರೇಸ್ ವಾಣಿಜ್ಯ ಕೇಂದ್ರದ ಎರಡನೇ ಮಹಡಿ ಮೆಟ್ಟಿಲುಗಳ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದರು ಎನ್ನಲಾಗಿದೆ.

"ಸಂಜೆ 5:15 ರ ಸುಮಾರಿಗೆ ಸಂಭವಿಸಿದ ಬೆಂಕಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿಯು ಎರಡನೇ ಮಹಡಿಯಲ್ಲಿನ ವಿದ್ಯುತ್ ವೈರಿಂಗ್ ಮತ್ತು ಬೋರ್ಡ್ ಗಳಿಗಷ್ಟೇ ವ್ಯಾಪಿಸಿತು ಎಂದು ಅವರು ಹೇಳಿದ್ದಾರೆ.

ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News