×
Ad

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ; ಮೋರಿಗಾಂವ್‌ ಜಿಲ್ಲೆಯಲ್ಲಿ 45,000 ಜನರು ಸಂಕಷ್ಟದಲ್ಲಿ

ಅಸ್ಸಾಂ ರಾಜ್ಯದ ಮೋರಿಗಾಂವ್‌ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು 106 ಗ್ರಾಮಗಳ ಕನಿಷ್ಠ 45.000 ಜನರು ಸಂಕಷ್ಟಕ್ಕೀಡಾಗಿದ್ದಾರೆ

Update: 2023-08-31 11:50 IST

PHOTO:PTI

ಗುವಹಾಟಿ: ಅಸ್ಸಾಂ ರಾಜ್ಯದ ಮೋರಿಗಾಂವ್‌ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು 106 ಗ್ರಾಮಗಳ ಕನಿಷ್ಠ 45.000 ಜನರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ನೆರೆ ನೀರಿನಿಂದಾಗಿ 3059 ಹೆಕ್ಟೇರ್‌ ಕೃಷಿ ಭೂಮಿ ಜಲಾವೃತಗೊಂಡಿದೆ.

ಪ್ರವಾಹ ಪೀಡಿತ ನೂರಾರು ಜನರು ತಮ್ಮ ಮನೆಗಳಿಗೆ ನೆರೆ ನೀರು ನುಗ್ಗಿದ ನಂತರ ದಾರಿ ಕಾಣದೆ ರಸ್ತೆಗಳಲ್ಲಿಯೇ ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ.

ಬ್ರಹ್ಮಪುತ್ರ ನದಿ ನೀರಿನ ಮಟ್ಟ ಏರುತ್ತಲೇ ಇದೆ ಎಂದು ತಮ್ಮ ಮನೆಗಳನ್ನು ಪ್ರವಾಹಕ್ಕೆ ಕಳೆದುಕೊಂಡಿರುವ ಜನರು ಹೇಳುತ್ತಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಮಾಯೊಂಗ್‌ ಕಂದಾಯ ವೃತ್ತ ಪ್ರದೇಶದಲ್ಲಿ ಸುಮಾರು 3000 ಹೆಕ್ಟೇರ್‌ ಕೃಷಿ ಪ್ರದೇಶ ಮುಳುಗಡೆಯಾಗಿದೆ. ಬರ್ಮರಿಪತರ್‌ ಸಿಲ್ದುಬಿ ಪ್ರದೇಶದಲ್ಲಿ 10,000ದಿಂದ 15000 ಜನರು ಪ್ರವಾಹಪೀಡಿತರಾಗಿದ್ದು ತಮ್ಮ ಸಾಕುಪ್ರಾಣಿಗಳೊಂದಿಗೆ ಜನರು ರಸ್ತೆಗಳಲ್ಲಿಯೇ ಇರುವಂತಾಗಿದೆ. ಸರ್ಕಾರದಿಂದ ಸಹಾಯಕ್ಕಾಗಿ ನೆರೆಸಂತ್ರಸ್ತ ಜನರು ಮೊರೆಯಿಡುತ್ತಿದ್ದಾರೆ.

ಒಟ್ಟಾರೆಯಾಗಿ ಅಸ್ಸಾಂ ರಾಜ್ಯದ 22 ಜಿಲ್ಲೆಗಳ 3.41 ಲಕ್ಷ ಜನರು ಪ್ರವಾಹಪೀಡಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತಗಳು 153 ಪರಿಹಾರ ಶಿಬಿರಗಳನ್ನು ಆರಂಭಿಸಿವೆ.

ರಾಜ್ಯದಲ್ಲಿ ಒಟ್ಟು 22,000 ಹೆಕ್ಟೇರ್‌ ಕೃಷಿ ಭೂಮಿ ಪ್ರವಾಹದಿಂದ ಮುಳುಗಡೆಯಾಗಿದೆ ಎಂದು ರಾಜ್ಯ ಕೃಷಿ ಸಚಿವ ಅತುಲ್‌ ಬೋರಾ ಹೇಳಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News