"ಮೂರ್ಖರು ಯುವಕರ ಮಾತು ಕೇಳುವುದಿಲ್ಲ": ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಕುರಿತ ಚರ್ಚೆ ವೇಳೆ ರಾಹುಲ್ ಹೇಳಿಕೆ : ಲೋಕಸಭೆಯಲ್ಲಿ ಗದ್ದಲ

Update: 2026-07-29 13:40 IST

Photo: YouTube/@Sansad TV

ಹೊಸದಿಲ್ಲಿ :  ಪರೀಕ್ಷಾ ಅಕ್ರಮಗಳನ್ನು ತಡೆಯಲು ಪ್ರಸ್ತಾವಿತ ಸಾರ್ವಜನಿಕ ಪರೀಕ್ಷೆಗಳ(ಅಕ್ರಮ ತಡೆ) ತಿದ್ದುಪಡಿ ಮಸೂದೆ ಬಗ್ಗೆ  ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡುವಾಗ ವಿದ್ಯಾರ್ಥಿ- ಈಡಿಯಟ್-ಅಂಧಭಕ್ತ ಹೇಳಿಕೆ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. 

ರಾಹುಲ್ ಗಾಂಧಿ ಅವರು ಯುವತಿಯೊಬ್ಬರ ಮಾತುಗಳನ್ನು ಉಲ್ಲೇಖಿಸಿ, "ಮೂರ್ಖರು ಯುವಕರ ಮಾತು ಕೇಳುವುದಿಲ್ಲ" ಎಂದು ಆಕೆ ತಮಗೆ ಹೇಳಿದ್ದಾಗಿ ಲೋಕಸಭೆಯಲ್ಲಿ ಹೇಳಿದರು. ಇದು ತೀವ್ರ ಗದ್ದಲಕ್ಕೆ ಕಾರಣವಾಯಿತು.

ಲೋಕಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ ವಿದ್ಯಾರ್ಥಿ ಎಂದರೆ ಯಾರು ಎಂದು ವಿವರಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಯುವತಿಯೊಬ್ಬಳ ಮಾತನ್ನು ಉಲ್ಲೇಖಿಸಿ "ಮೂರ್ಖರು ಯುವಕರ ಮಾತು ಕೇಳುವುದಿಲ್ಲ" ಎಂದು ಹೇಳದ್ದಾಗಿ ತಿಳಿಸಿದರು.

ಈ ಹೇಳಿಕೆಯು ಆಡಳಿತ ಪಕ್ಷದ ಸಂಸದರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಸಭೆಯಲ್ಲಿ ದೊಡ್ಡ ಗದ್ದಲವೇ ಏರ್ಪಟ್ಟಿತು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಷಯಕ್ಕೆಷ್ಟೇ ಸೀಮಿತವಾಗಿ ಮಾತನಾಡುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಗದ್ದಲ ಮುಂದುವರಿದಾಗ, ತಾವು ಕೇವಲ ವಿದ್ಯಾರ್ಥಿ ಎಂದರೆ ಯಾರು ಎಂಬುದನ್ನು ವ್ಯಾಖ್ಯಾನಿಸುತ್ತಿದ್ದೇನೆಯೇ ವಿನಃ ಯಾರ ಹೆಸರನ್ನೂ ಉಲ್ಲೇಖಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.

ಬಳಿಕ ಮಾತು ಮುಂದುವರಿಸಿದ ರಾಹುಲ್‌ ಗಾಂಧಿ, ವಿದ್ಯಾರ್ಥಿಗಳ ಪ್ರತಿಭಟನೆಗಳು ಅಭಿವ್ಯಕ್ತಿಯ ಭಾಗವಾಗಿದ್ದವು, ಹಿಂಸೆ ಅಥವಾ ದ್ವೇಷದ ಪ್ರದರ್ಶನವಾಗಿರಲಿಲ್ಲಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News