ಎಐಎಡಿಎಂಕೆಯಿಂದ ಉಚ್ಚಾಟಿತ ಮಾಜಿ ಸಚಿವ ಕೆ.ಎ. ಸೆಂಗೊಟ್ಟೈಯನ್ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸೇರ್ಪಡೆ
Update: 2025-11-27 13:16 IST
Photo | thehindu
ಚೆನ್ನೈ: ಕಳೆದ ತಿಂಗಳು ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಚಿವ ಹಾಗೂ 9 ಬಾರಿ ಶಾಸಕರಾಗಿದ್ದ ಕೆ.ಎ.ಸೆಂಗೊಟ್ಟೈಯನ್ ಗುರುವಾರ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಸೇರ್ಪಡೆಯಾದರು.
ತಮ್ಮ ಬೆಂಬಲಿಗರೊಂದಿಗೆ ಚೆನ್ನೈ ಬಳಿಯಿರುವ ವಿಜಯ್ ರ ಪನಯ್ಯೂರ್ ಕಚೇರಿಗೆ ಆಗಮಿಸಿದ ಕೆ.ಎ.ಸೆಂಗೊಟ್ಟೈಯನ್ ರನ್ನು ಕೊಯಮತ್ತೂರು, ಈರೋಡ್, ತಿರುಪ್ಪೂರ್ ಹಾಗೂ ನೀಲ್ ಗಿರೀಸ್ ಜಿಲ್ಲೆಗಳ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಇದಕ್ಕೂ ಮೊದಲು ಪಕ್ಷ ವಿರೋಧ ಚಟುವಟಿಕೆಗಳ ಆರೋಪದ ಮೇಲೆ ಎಐಎಡಿಎಂಕೆ ಪಕ್ಷದಿಂದ ಕೆ.ಎ.ಸೆಂಗೊಟ್ಟೈಯನ್ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಆ ಬಳಿಕ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಬಳಿಕ, ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ರನ್ನು ಭೇಟಿಯಾಗಿದ್ದ ಕೆ.ಎ.ಸೆಂಗೊಟ್ಟೈಯನ್ ಪಕ್ಷ ಸೇರ್ಪಡೆಯ ಕುರಿತು ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದರು.