×
Ad

ಗುಜರಾತ್: ಶೌಚಗುಂಡಿ ಸ್ವಚ್ಛತೆಯ ವೇಳೆ ಉಸಿರುಗಟ್ಟಿ ನಾಲ್ವರು ಸಾವು

Update: 2023-11-15 21:55 IST

ಸಾಂದರ್ಭಿಕ ಚಿತ್ರ

ಸೂರತ್: ಗುಜರಾತ್‌ ನ ಸೂರತ್ ನಗರದ ಕಾರ್ಖಾನೆಯೊಂದರಲ್ಲಿ ಶೌಚಗುಂಡಿಗೆ ಇಳಿದ ನಾಲ್ವರು ನೈರ್ಮಲ್ಯ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.

ಪಾಲಸಾನಾ-ಕಟೋದರಾ ರಸ್ತೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಮೂರ್ಛೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರು ಕಾರ್ಮಿಕರಿಗೂ ಬಳಳಿಕೆಯುಂಟಾಗಿ ಅವರು ಕೂಡಾ ಕುಸಿದುಬಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶೌಚಗುಂಡಿಯಿಂದ ನಾಲ್ವರನ್ನೂ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ನಾಲ್ವರು ಕಾರ್ಮಿಕರು ಬಿಹಾರದವರೆಂದು ಅವರು ಹೇಳಿದ್ದಾರೆ.

ಕಳೆದ ಶುಕ್ರವಾರ ಗುಜರಾತ್‌ ನ ಭಾವನಗರದಲ್ಲಿ ಸರಕಾರಿ ಪ್ರಯೋಗಾಲಯವೊಂದರ ಶೌಚಗುಂಡಿಗೆ ಇಳಿದ ನೈರ್ಮಲ್ಯ ಕಾರ್ಮಿಕನೊಬ್ಬ ಅಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದನು.

ದೇಶಾದ್ಯಂತ ಮ್ಯಾನುವಲ್ ಸ್ಕ್ಯಾವೆಂಜಿಗ್ (ಮಲಹೊರುವಿಕೆ) ಪದ್ಧತಿಯು ಅಕ್ರಮವೆಂದು ಘೋಷಿಸಿರುವ ಹೊರತಾಗಿಯೂ, ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ಗಳ ಸಾವಿನ ಪ್ರಕರಣಗಳು ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. 2022ರ ಮಾರ್ಚ್ ನಿಂದ 2023ರ ಎಪ್ರಿಲ್ ವರೆಗೆ ಗುಜರಾತ್‌ ನ ವಿವಿಧೆಡೆ ಶೌಚಗುಂಡಿನ ಸ್ವಚ್ಛತಾ ಕಾರ್ಯದ ವೇಳೆ ಎಂಟು ಮಂದಿ ಸಾವನ್ನಪ್ಪಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News