×
Ad

‘ಮುಸ್ಲಿಮರನ್ನು ಮತ ಚಲಾಯಿಸದಂತೆ ತಡೆಯಲಾಗುತ್ತಿದೆ’ : ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷದಿಂದ ದೂರು

ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಮುಸ್ಲಿಮರನ್ನು ಮತಚಲಾಯಿಸುವುದರಿಂದ ತಡೆಯಲಾಗುತ್ತಿದೆ ಎಂದು ದೂರಿ ಸಮಾಜವಾದಿ ಪಕ್ಷ ಇಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ

Update: 2023-09-05 18:04 IST

PHOTO:PTI

ಲಕ್ನೋ: ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಮುಸ್ಲಿಮರನ್ನು ಮತಚಲಾಯಿಸುವುದರಿಂದ ತಡೆಯಲಾಗುತ್ತಿದೆ ಎಂದು ದೂರಿ ಸಮಾಜವಾದಿ ಪಕ್ಷ ಇಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

“ಘೋಸಿ ಕ್ಷೇತ್ರದ ಬೂತ್‌ ಸಂಖ್ಯೆ 137ನ ಮತದಾನ ಅಧಿಕಾರಿಯು ಮುಸ್ಲಿಮರಿಗೆ ಮತ ಚಲಾಯಿಸಲು ಅನುಮತಿಸುತ್ತಿಲ್ಲ. ಮುಸ್ಲಿಮರು ಬೂತಿಗೆ ಆಗಮಿಸಿದಾಗ ಅವರ ಮತವನ್ನು ಈಗಾಗಲೇ ಚಲಾಯಿಸಲಾಗಿದೆ ಎಂದು ಅವರಿಗೆ ಹೇಳಲಾಗುತ್ತಿದೆ,” ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಅರವಿಂದ್‌ ಕುಮಾರ್‌ ಸಿಂಗ್‌ ಆರೋಪಿಸಿದ್ದಾರೆ.

ಆಕ್ಷೇಪಿಸಿದ ಮುಸ್ಲಿಂ ಮತದಾರರನ್ನು ಪೊಲೀಸರು ಮತ್ತು ಮತದಾನ ಅಧಿಕಾರಿ ನಿಂದಿಸಿದ್ದಾರೆ. ದೌಲತಪುರ್‌ ಗ್ರಾಮದ ಮುಖ್ಯಸ್ಥರು ಮತ್ತು 419 ಸಂಖ್ಯೆಯ ಬೂತಿನ ಏಜಂಟರಿಗೆ ಎಲ್ಲಾ ನಿವಾಸಿಗಳು ಬಿಜೆಪಿಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲು ಬಲವಂತಪಡಿಸಲಾಗಿದೆ ಎಂದೂ ಸಿಂಗ್‌ ಆರೋಪಿಸಿದ್ದಾರೆ.

ಕಠಿಣ ಕ್ರಮ ಕೈಗೊಂಡು ನಿಷ್ಪಕ್ಷಪಾತ ಮತ್ತು ನ್ಯಾಯಯುತ ಚುನಾವಣೆಗೆ ಅನುಕೂಲ ಕಲ್ಪಿಸುವಂತೆ ಸಮಾಜವಾದಿ ಪಕ್ಷವು ಚುನಾವಣಾ ಆಯೋಗವನ್ನು ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News