×
Ad

ಮತ್ತೆ ಕುಸಿದ ಚಿನ್ನ-ಬೆಳ್ಳಿಯ ದರ; ಇಂದಿನ ದರವೆಷ್ಟು?

Update: 2026-06-06 12:01 IST

ಸಾಂದರ್ಭಿಕ ಚಿತ್ರ (AI)

ಮಂಗಳವಾರ ಮತ್ತು ಬುಧವಾರ ಸ್ಥಿರವಾಗಿದ್ದ ಚಿನ್ನದ ಮೌಲ್ಯ ಗುರುವಾರದಿಂದ ಮತ್ತೆ ಕುಸಿತದ ಹಾದಿಯಲ್ಲಿದೆ.

ಅಮೆರಿಕದ ದೃಢವಾದ ಉದ್ಯೋಗ ದತ್ತಾಂಶ, ಅಲ್ಲಿನ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಸಲಿದೆ ಎನ್ನುವ ಮುನ್ಸೂಚನೆಗಳು, ಅಮೆರಿಕ ಮತ್ತು ಇರಾನ್ ನಡುವೆ ಶೀಘ್ರವೇ ಶಾಂತಿ ಒಪ್ಪಂದದ ಯಾವುದೇ ಲಕ್ಷಣವಿಲ್ಲದಿರುವುದು ಮತ್ತು ಪ್ರಮುಖ ಹಾರ್ಮುಝ್ ಜಲಮಾರ್ಗದ ಕುರಿತ ಮುಂದುವರಿದ ಅನಿಶ್ಚಿತತೆಯಿಂದ ಚಿನ್ನ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ.

ಹೀಗಾಗಿ ಕಳೆದ ವಾರವಿಡೀ ಕಡಿಮೆಯಾಗಿದ್ದ ಚಿನ್ನದ ದರ ಶುಕ್ರವಾರ ಸ್ವಲ್ಪ ಏರಿಕೆ ಕಂಡಿತ್ತು. ಕಳೆದ ಶನಿವಾರ ಮತ್ತು ಇದೇ ಸೋಮವಾರ ಚಿನ್ನದ ಬೆಲೆ ಕುಸಿದಿತ್ತು. ಮಂಗಳವಾರ ಮತ್ತು ಬುಧವಾರ ಸ್ಥಿರವಾಗಿದ್ದ ಚಿನ್ನದ ಮೌಲ್ಯ ಗುರುವಾರದಿಂದ ಮತ್ತೆ ಕುಸಿತದ ಹಾದಿಯಲ್ಲಿದೆ. ಕಳೆದೊಂದು ವಾರದಿಂದ ಸ್ಥಿರವಾಗಿದ್ದ ಬೆಳ್ಳಿಯ ದರವೂ ಕಡಿಮೆಯಾಗುತ್ತ ಬಂದಿದೆ.

ತೀವ್ರ ಕುಸಿದ ಚಿನ್ನದ ದರ

ಜೂನ್ 6ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 300 ರೂ. ಕಡಿಮೆಯಾಗಿ ಹತ್ತು ಗ್ರಾಂ ಬೆಲೆ 1,52,730 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 275 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,40,000 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 225 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,14,550 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಜೂನ್ 6ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,273 (-300) ರೂ.ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,000 (-275) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,455 (-225) ರೂ. ಬೆಲೆಗೆ ಬಂದು ತಲುಪಿದೆ.

ತೀವ್ರ ಕುಸಿದ ಬೆಳ್ಳಿಯ ಮೌಲ್ಯ

ಮಾರ್ಚ್ ಮತ್ತು ಎಪ್ರಿಲ್ ನಲ್ಲಿ 2,55,000 ರೂ. ಸುತ್ತ ಮುತ್ತ ಬಂದು ನಿಂತಿದ್ದ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷದವರೆಗೂ ಏರಿತ್ತು. ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯ ಆಸುಪಾಸಿನಲ್ಲಿ ಮುಂದುವರಿದಿತ್ತು. ಕಳೆದ ವಾರ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಈ ವಾರವೂ ಅದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಆದರೆ, ಶುಕ್ರವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ತಲುಪಿತು. ಶನಿವಾರ ಬೆಳ್ಳಿಯ ಮೌಲ್ಯ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,65,000 ರೂ.ಗೆ ಬಂದು ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,591 (+3) ರೂ., 22 ಕ್ಯಾರೆಟ್ ಚಿನ್ನದ ದರ 14,015 (–275) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,273 (-300) ರೂ., 22 ಕ್ಯಾರೆಟ್ ಚಿನ್ನದ ದರ 14,000 (-275) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,581 (+3) ರೂ., 22 ಕ್ಯಾರೆಟ್ ಚಿನ್ನದ ದರ 14,005 (–275) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,491 (-305) ರೂ., 22 ಕ್ಯಾರೆಟ್ ಚಿನ್ನದ ದರ 14,200 (-230) ರೂ.

×
Ad

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,273 (-300) ರೂ., 22 ಕ್ಯಾರೆಟ್ ಚಿನ್ನದ ದರ 14,000 (-275) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,273 (-300) ರೂ., 22 ಕ್ಯಾರೆಟ್ ಚಿನ್ನದ ದರ 14,000 (-275) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 15,591 (+3) ರೂ., 22 ಕ್ಯಾರೆಟ್ ಚಿನ್ನದ ದರ 14,015 (–275) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,591 (+3) ರೂ., 22 ಕ್ಯಾರೆಟ್ ಚಿನ್ನದ ದರ 14,015 (–275) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,591 (+3) ರೂ., 22 ಕ್ಯಾರೆಟ್ ಚಿನ್ನದ ದರ 14,015 (–275) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News