ಪ್ರತಿಷ್ಠಿತ ʼನಾರ್ವೆ ಚೆಸ್ʼ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಆರ್ ಪ್ರಜ್ಞಾನಂದ
ಪ್ರಜ್ಞಾನಂದ | PC : @rpraggnachess
ನಾರ್ವೆ : ಭಾರತದ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಓಸ್ಲೋದಲ್ಲಿ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅಂತಿಮ ಸುತ್ತಿನಲ್ಲಿ ಜಯಿಸುವ ಮೂಲಕ ಪ್ರತಿಷ್ಠಿತ ʼನಾರ್ವೆ ಚೆಸ್ʼ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಅವರು 6 ಇತರೆ ಪ್ರಮುಖ ಆಟಗಾರರ ಎದುರು ನಿಧಾನಗತಿಯಲ್ಲಿ ಮುನ್ನಡೆ ಪಡೆದಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ನಾರ್ವೆ ಚೆಸ್‌ನಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಮತ್ತು ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು 2 ಬಾರಿ ಸೋಲಿಸುವ ಮೂಲಕ ಪ್ರಜ್ಞಾನಂದ ಮೇಲುಗೈ ಸಾಧಿಸಿದ್ದರು.
ನಾರ್ವೆ ಚೆಸ್ ಪಂದ್ಯಾವಳಿಯು ಪ್ರತಿಷ್ಠಿತ ಪಂದ್ಯಾವಳಿಯಾಗಿದ್ದು, ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್, ಅಲಿರೆಜಾ ಫಿರೋಝ್ಜಾ, ವೆಸ್ಲಿ ಸೋ ಮತ್ತು ಕೇಮರ್ ಭಾಗವಹಿಸಿದ್ದರು.
ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಅವರಿಗೆ ಸಾಧ್ಯವಾಗದ ಈ ಅಪರೂಪದ ಸಾಧನೆಯನ್ನು ಪ್ರಜ್ಞಾನಂದ ಮಾಡಿದ್ದಾರೆ.