CJP ಪ್ರತಿಭಟನೆ | ಜಂತರ್ ಮಂತರ್ ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ
ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಗೆ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದರು.
"ನಾವು ಶಿಕ್ಷಣ ಸಚಿವರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ; ಅವರು ನಮ್ಮ ತೆರಿಗೆಯಿಂದ ಸಂಬಳ ಪಡೆಯುತ್ತಾರೆ. ಅವರ ಅವಧಿಯಲ್ಲಿ ಲಕ್ಷಾಂತರ ಯುವಕರ ಭವಿಷ್ಯವು ಕತ್ತಲೆಯಲ್ಲಿ ಮುಳುಗಿದೆ. ಕಾಕ್ರೋಚ್ ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಹೋಗುತ್ತಿದ್ದಾರೆ" ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಜಂತರ್ ಮಂತರ್ ನಲ್ಲಿ ಶನಿವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಅಮೆರಿಕದಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ದಿಲ್ಲಿಗೆ ಆಗಮಿಸಿದ್ದಾರೆ. ಕಾಕ್ರೋಚ್ ಗಳು ಜಂತರ್ ಮಂತರ್‌ಗೆ ಬರಬೇಕು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅಭಿಜೀತ್ ದಿಪ್ಕೆ ಆಗ್ರಹಿಸಿದ್ದರು.
Cockroach Party Zindabad!
— Cockroach is Back (@Cockroachisback) June 6, 2026
Thousands of protesters begin arriving at Jantar Mantar to demand the resignation of Dharmendra Pradhan.
Are you at Jantar Mantar?
Tag us in your pictures and videos with #cjpprotest pic.twitter.com/nzoSUQYJeB
Supporters of Cockroach Janta Party gather at Jantar Mantar for protest demanding Dharmendra Pradhan's resignation @DeccanHerald pic.twitter.com/qXAOnnfSTL
— Shemin (@shemin_joy) June 6, 2026