×
Ad

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ರ ಪತ್ನಿ ಕ್ಯಾನ್ಸರ್ ನಿಂದ ನಿಧನ

Update: 2024-05-16 12:17 IST

ನರೇಶ್ ಗೋಯಲ್ , ಅನಿತಾ ಗೋಯಲ್ | PC : NDTV 

ಮುಂಬೈ: ಅಂತಿಮ ಹಂತದ ಕ್ಯಾನ್ಸರ್ ನೊಂದಿಗೆ ಸೆಣಸುತ್ತಿದ್ದ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅನಿತಾ ಗೋಯಲ್ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳಾದ ನಮ್ರತಾ ಹಾಗೂ ನಿವಾನ್ ಗೋಯಲ್ ರನ್ನು ಅಗಲಿದ್ದಾರೆ.

ವರದಿಗಳ ಪ್ರಕಾರ, ಅನಿತಾ ಗೋಯಲ್ ಗುರುವಾರ ಮುಂಜಾನೆ 3ರ ವೇಳೆಗೆ ಕೊನೆಯುಸಿರೆಳೆದರು ಹಾಗೂ ಈ ಸಂದರ್ಭದಲ್ಲಿ ಮುಂಬೈನ ತಮ್ಮ ನಿವಾಸದಲ್ಲಿ ನರೇಶ್ ಗೋಯಲ್ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ.

ಜೆಟ್ ಏರ್ ವೇಸ್ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷರಾಗಿದ್ದ ಅನಿತಾ ಗೋಯಲ್, ಸಂಸ್ಥೆಯ ಕಾರ್ಯಾಚರಣೆ ತಂಡದ ಭಾಗವಾಗಿದ್ದರು.

ಸ್ವತಃ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ನರೇಶ್ ಗೋಯಲ್, ತಮ್ಮ ಪತ್ನಿಯೊಂದಿಗಿರಲು ಮಾನವೀಯತೆಯ ನೆಲೆಯಲ್ಲಿ ಬಾಂಬೆ ಹೈಕೋರ್ಟ್ ನಿಂದ ಈ ತಿಂಗಳ ಆರಂಭದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಸೆಪ್ಟೆಂಬರ್ 1, 2023ರಲ್ಲಿ ಬಂಧಿಸಲಾಗಿತ್ತು.

ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಆರ್ತೂರ್ ರಸ್ತೆಯ ಕೇಂದ್ರೀಯ ಬಂದೀಖಾನೆಯಲ್ಲಿರಿಸಲಾಗಿದೆ.

ಜಾರಿ ನಿರ್ದೇಶನಾಲಯವು ಆರೋಪಿಸಿರುವಂತೆ, ಜೆಟ್ ಏರ್ ವೇಸ್ ಸಮೂಹ ಸಂಸ್ಥೆಗೆ ಕೆನರಾ ಬ್ಯಾಂಕ್ ಮಂಜೂರು ಮಾಡಿದ್ದ ರೂ. 538.62 ಕೋಟಿ ಮೊತ್ತದ ಸಾಲವನ್ನು ನನ್ನ ವೈಯಕ್ತಿಕ ಲಾಭಕ್ಕಾಗಿ ವರ್ಗಾಯಿಸಿಲ್ಲ ಎಂದು ನರೇಶ್ ಗೋಯಲ್ ತಮ್ಮ ಜಾಮೀನು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News