×
Ad

ಖೇಲೋ ಇಂಡಿಯಾ ಯೂತ್ ಗೇಮ್ಸ್ 2025: ಮಿಂಚಿದ ಕರ್ನಾಟಕದ ಕುಸ್ತಿಪಟುಗಳು

Update: 2025-05-17 21:18 IST

ಬೆಂಗಳೂರು: ಬಿಹಾರದ ಪಾಟ್ನಾದಲ್ಲಿ ನಡೆದ 2025ರ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕರ್ನಾಟಕದ ಕುಸ್ತಿಪಟುಗಳು ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ.

ಪುರುಷರ 51 ಕೆ.ಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಧಾರವಾಡ ಹಾಸ್ಟೆಲ್‌ನ ಅಮ್ಮ ಗೋಡಾ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಮಹಿಳೆಯರ 17 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ಕುಸ್ತಿಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. 53 ಕೆ.ಜಿ ವಿಭಾಗದಲ್ಲಿ ಕಾವ್ಯಾ ತುಕಾರಾಮ್ ದಾನ್ವೇನವರ್ ಅವರು ದಿಲ್ಲಿಯ ಅಕ್ಷರಾ ವಿರುದ್ಧ ಸವಾಲಿನ ಹೋರಾಟದ ನಂತರ ಬೆಳ್ಳಿ ಪದಕ ಗೆದ್ದರು. ಕಾವ್ಯಾ ಮತ್ತೊಂದು ಬೆಳ್ಳಿ ಪದಕವನ್ನು ಗಳಿಸಿದರು. ಈ ಮೂಲಕ ರಾಜ್ಯದ ಭರವಸೆಯ ಯುವ ಕುಸ್ತಿಪಟುಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

57 ಕೆ.ಜಿ ವಿಭಾಗದಲ್ಲಿ ಕರ್ನಾಟಕದ ಕಾವೇರಿ ತಲಗೇರಿ ಅವರು ಮಹಾರಾಷ್ಟ್ರದ ಐಷ್ಕಾ ಪಾಂಡುರಂ ವಿರುದ್ಧ 4-2 ಅಂಕಗಳಿಂದ ಗೆಲುವು ಸಾಧಿಸಿ ಬೆಳ್ಳಿ ಪದಕ ಗೆದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಭಾರತ ಕುಸ್ತಿ ಸಂಘದ ಉಪಾಧ್ಯಕ್ಷ ಹಾಗೂ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರು, ‘‘ಕರ್ನಾಟಕ ತಂಡದ ಈ ಹೆಮ್ಮೆಯ ಕ್ಷಣದಲ್ಲಿ, ಅವರ ಗಮನಾರ್ಹ ಪ್ರಯತ್ನಗಳು ಹಾಗೂ ಸಾಧನೆಗಳಿಗಾಗಿ ನಾನು ಇಡೀ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಚಾಂಪಿಯನ್‌ಶಿಪ್‌ನಲ್ಲಿನ ಯಶಸ್ಸು ರಾಷ್ಟ್ರೀಯ ಕುಸ್ತಿ ವಲಯದಲ್ಲಿ ಕರ್ನಾಟಕದ ಬೆಳೆಯುತ್ತಿರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News