×
Ad

ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದರತ್ತ ನುಗ್ಗಿದ ಅಪರಿಚಿತರು

Update: 2023-12-13 13:26 IST

Photo credit: The Quint

ಹೊಸದಿಲ್ಲಿ: ಲೋಕಸಭೆಯಲ್ಲಿ ಭದ್ರತಾ ಲೋಪ ಉಂಟಾಗಿರುವುದಾಗಿ ವರದಿಯಾಗಿದೆ. ಇಬ್ಬರು ಗ್ಯಾಲರಿಯಿಂದ ಜಿಗಿದಿದ್ದಾರೆ ಎಂದು ಸಂಸದರು ಆರೋಪಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿದೆ.

ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸುತ್ತಿದ್ದಂತೆ ಸಂಸದರು ಲೋಕಸಭೆಯಿಂದ ಹೊರಬಂದಿದ್ದಾರೆ.

ಸಭಾಪತಿ ರಾಜೇಂದ್ರ ಅಗರವಾಲ್ ಕೂಡಲೇ ಕಲಾಪವನ್ನು ಮುಂದೂಡಿದರು.

ಒಳನುಗ್ಗಿದವರನ್ನು ಇನ್ನೂ ಗುರುತಿಸಬೇಕಿದೆ. ಸಂಸತ್ತಿನ ಅಧಿಕೃತ ಹೇಳಿಕೆಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News