Photo Credit: PTI

ಕಠ್ಮಂಡು: ಬುಧವಾರ ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. 4,200ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮುಚ್ಚಿಹೋಗಿರುವ ಜಲವಿದ್ಯುತ್ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿರುವ ನೂರಾರು ಮಂದಿಯನ್ನು ರಕ್ಷಿಸಲು ರಕ್ಷಣಾ ತಂಡಗಳು ಅಹೋರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ.

ಬುಧವಾರ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ನೇಪಾಳದಲ್ಲಿನ ಪಟ್ಟಣ ಮತ್ತು ಗ್ರಾಮಗಳು ಹಾಗೂ ಚೀನಾ ಗಡಿಯಾದ್ಯಂತ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಹಿಮನದಿ ಕುಸಿದಿದ್ದರಿಂದ ಈ  ದುರಂತ ಸಂಭವಿಸಿದ್ದು, ವ್ಯಾಪಕ ಪ್ರಮಾಣದ ಆಸ್ತಿಪಾಸ್ತಿ ಹಾನಿ, ಜೀವಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. 

ಬುಧವಾರ ಪರ್ವತ ಪ್ರದೇಶಗಳ ನದಿಗಳ ಮೂಲಕ ಬಂಡೆ, ಮಂಜುಗಡ್ಡೆ, ಮಣ್ಣು ಮತ್ತು ಶಿಲಾಖಂಡರಾಶಿಗಳ ಭಾರಿ ಪ್ರಮಾಣದ ಹರಿವು ಕೆಳಭಾಗಕ್ಕೆ ಬಂದಿತ್ತು. ಇದರ ರಭಸಕ್ಕೆ ಹಲವು ಕಟ್ಟಡಗಳು, ಸೇತುವೆಗಳು ಮತ್ತು ವಿದ್ಯುತ್‌ ಸ್ಥಾವರಗಳು ಕೊಚ್ಚಿಹೋಗಿವೆ.

ಪ್ರವಾಹದ ಬಳಿಕ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿವೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ಪ್ರತಿಕೂಲ ಹವಾಮಾನವೂ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಳೆ ಮತ್ತು ಮಂಜಿನಿಂದಾಗಿ ಕಾರ್ಯಾಚರಣೆಯನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಹವಾಮಾನ ಸುಧಾರಿಸಿದ ಬಳಿಕ ಮತ್ತೆ ಶೋಧಕಾರ್ಯ ಆರಂಭಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor